ಬೆಲಗೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಬಿಸಿಲನ್ನೂ ಲೆಕ್ಕಿಸದೇ ಸೇತುವೆ ಮೇಲೆ ಕುಳಿತಿರುವುದು
ಅಂಗಡಿಗಳ ಮುಂದೆ ಕುಳಿತಿರುವ ಪ್ರಯಾಣಿಕರು
ಪ್ರಯಾಣಿಕರ ತಂಗುದಾಣ ಇಲ್ಲದ ಕಾರಣ ನಿಗದಿತ ಸ್ಥಳದಲ್ಲಿ ಬಸ್‌ಗಳ ನಿಲುಗಡೆ ಮಾಡುವುದಿಲ್ಲ. ಒಂದೊಂದು ಬಸ್ ಒಂದೊಂದು ಕಡೆ ನಿಲ್ಲುತ್ತವೆ. ನಾವು ಓಡಿ ಹೋಗಿ ಹತ್ತಬೇಕು
ವನಜಾಕ್ಷಿ ಪ್ರಯಾಣಿಕರು
ವೃತ್ತ ನಿರ್ಮಿಸುವ ಭರವಸೆ
‘ಹ್ಯಾಂಡ್ ಪೋಸ್ಟ್ ನಿಲ್ದಾಣದಲ್ಲಿ ಒಂದು ವೃತ್ತ ನಿರ್ಮಿಸಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. ರಸ್ತೆ ವಿಸ್ತರಣೆ ವೇಳೆ ಹೈಮಾಸ್ಟ್ ದೀಪ ತೆರವು ಮಾಡಲಾಗಿತ್ತು. ತಾತ್ಕಾಲಿಕವಾಗಿ ಪಂಚಾಯಿತಿ ವತಿಯಿಂದ ಎಲ್‌ಇಡಿ ಬಲ್ಬ್ ಹಾಕಲಾಗಿದೆ. ಬೆಲಗೂರು ಮಾರ್ಗಕ್ಕೂ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುವುದು’ ಎಂದು ಕಾರೇಹಳ್ಳಿ ಪಿಡಿಒ ವಸಂತ್ ಕುಮಾರ್ ತಿಳಿಸಿದ್ದಾರೆ.