ಹಿರಿಯೂರು: ಈಚೆಗೆ ಸುರಿದ ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಪ್ರದೇಶಗಳಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂಜಯ್ಯನಕೊಟ್ಟಿಗೆ ಬಡಾವಣೆಗೆ ಹೋಗುವ ರಸ್ತೆಯ ಕೆಳಭಾಗದಲ್ಲಿರುವ ಜೈಮಿನಿ ಶಾಲೆಯ ಸುತ್ತಮುತ್ತಲ ತಗ್ಗುಪ್ರದೇಶ, ಮಲ್ಲೇಶ್ವರ ಬಡಾವಣೆ, ಸಿ.ಎಂ. ಬಡಾವಣೆಯಲ್ಲಿನ ಅಂಬೇಡ್ಕರ್ ಶಾಲೆ, ಅಂಗನವಾಡಿ ಕೇಂದ್ರ, ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ವಾಗ್ದೇವಿ ಶಾಲೆ ಸುತ್ತಮುತ್ತಲ ಪ್ರದೇಶವನ್ನು ಸಚಿವರು ವೀಕ್ಷಣೆ ಮಾಡಿದರು.

ಜಲಕಂಟಕಕ್ಕೆ ಅವೈಜ್ಞಾನಿಕ ರಾಜಕಾಲುವೆ, ಮನೆಯ ಮುಂದಿನ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವುದು, ಚರಂಡಿಗಳಲ್ಲಿ ಕಸಕಟ್ಟಿಕೊಂಡಿದ್ದು ಕಾರಣ. ಜೈಮಿನಿ ಶಾಲೆಯಿಂದ ರಾಜಕಾಲುವೆಯನ್ನು ವಿಸ್ತರಣೆ ಮಾಡಬೇಕು. ಮಲ್ಲೇಶ್ವರ ಬಡಾವಣೆಯಲ್ಲಿ ಅಂತ್ಯಗೊಂಡಿರುವ ಕಾಲುವೆಯನ್ನು ನೇರಗೊಳಿಸಿ ಗಾಂಧಿ ಬಡಾವಣೆ ಕೆಳಭಾಗದಿಂದ ಸಿಎಂ ಬಡಾವಣೆ ಮೂಲಕ ಲಕ್ಕವ್ವನಹಳ್ಳಿ ರಸ್ತೆಯ ಹಳ್ಳಕ್ಕೆ ಕಾಲುವೆಯನ್ನು ಸಂಪರ್ಕಿಸಿದಲ್ಲಿ ನಂತರ ಮಳೆಯ ನೀರು ವೇದಾವತಿ ನದಿಯನ್ನು ಸೇರುತ್ತದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು.

ಸೂಚನೆ: ‘ರಾಜಕಾಲುವೆ ಒತ್ತುವರಿ ಆಗಿದ್ದಲ್ಲಿ ಕಂದಾಯ, ಸರ್ವೇ, ನಗರಾಭಿವೃದ್ಧಿ ಯೋಜನೆ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು’ ಎಂದು ಸುಧಾಕರ್ ಸೂಚನೆ ನೀಡಿದರು.

‘ಚಳ್ಳಕೆರೆ ತಾಲ್ಲೂಕು ತಳಕು ಗ್ರಾಮದಲ್ಲಿ ಶುಕ್ರವಾರ ರಾತ್ರಿ 1.12 ಸೆಂ.ಮೀ. ಮಳೆಯಾಗಿರುವ ವರದಿ ಬಂದಿದೆ. ಹೀಗಾಗಿ ಒಮ್ಮೆಗೆ 1ರಿಂದ 1.2 ಸೆಂ.ಮೀ. ಮಳೆಯಾದರೆ ಎಷ್ಟು ಪ್ರಮಾಣದ ನೀರು ಹರಿದು ಬರಬಹುದು ಎಂದು ಅಂದಾಜಿಸಿ ರಾಜಕಾಲುವೆ ಹಾಗೂ ಇತರೆ ಮುಖ್ಯ ಕಾಲುವೆಗಳನ್ನು ವಿಸ್ತರಿಸಿ. ಯಾವುದೇ ಒತ್ತಡಗಳಿಗೆ ಒಳಗಾಗಬೇಡಿ. ನಾಗರಿಕರ ಪ್ರಾಣ– ಆಸ್ತಿ ಕಾಪಾಡಬೇಕೆಂದರೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ’ ಎಂದು ಸುಧಾಕರ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ವಿಠ್ಠಲ್ ಪಾಂಡುರಂಗ, ಎಂ.ಡಿ. ಸಣ್ಣಪ್ಪ, ಎಲ್.ಜಿ. ರತ್ನಮ್ಮ , ಪೌರಾಯುಕ್ತ ಎ.ವಾಸೀಂ, ನಗರಸಭಾ ಸದಸ್ಯರಾದ ಈರಲಿಂಗೇಗೌಡ, ಅಂಬಿಕಾ ಆರಾಧ್ಯ, ಬಿ.ಎನ್.ಪ್ರಕಾಶ್, ಗುಂಡೇಶ್ ಕುಮಾರ್, ಶಿವಕುಮಾರ್, ಖಾದಿ ರಮೇಶ್, ಜ್ಞಾನೇಶ್, ತಿಪ್ಪೇಸ್ವಾಮಿ ಹಾಗೂ ನಗರಸಭೆಯ ಎಂಜಿನಿಯರ್ಗಳು, ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

ಚಳ್ಳಕೆರೆ ಹಾಗೂ ನಾಯಕನಹಟ್ಟಿ ಸಮೀಪದ ಡಿಆರ್ಡಿಒಗೆ ಹೋಗಿರುವ ಕೊಳವೆ ಮಾರ್ಗ ಬದಲಾವಣೆ ಕಾರಣಕ್ಕೆ ನಿಧಾನಗೊಂಡಿರುವ ಪ್ರಧಾನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಸಚಿವ ಡಿ. ಸುಧಾಕರ್ ಪರಿಶೀಲನೆ ನಡೆಸಿದರು. ಕೇಂದ್ರ ಪುರಸ್ಕೃತ 2.0 ಯೋಜನೆಯಡಿಯಲ್ಲಿ ನಗರದ ಪ್ರವಾಸಿ ಮಂದಿರ ವೃತ್ತದಿಂದ ವೇದಾವತಿ ಸೇತುವೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರದ ವಿವಿಧ ಪ್ರದೇಶದಲ್ಲಿ 250 200 160 110 ಮತ್ತು 90 ಮಿ.ಮೀ. ವ್ಯಾಸದ 49.10 ಕಿ.ಮೀ ಉದ್ದದ ವಿತರಣಾ ಕೊಳವೆ ಮಾರ್ಗ ಅಳವಡಿಸುವಿಕೆ ಕಾಮಗಾರಿಯನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.