ಶುಕ್ರವಾರ, ಸೆಪ್ಟೆಂಬರ್ 24, 2021
24 °C

ರಂಗನಾಥ್‌ ಪ್ರಾಮಾಣಿಕತೆ ಮೆಚ್ಚಿ ಸನ್ಮಾನಿಸಿದ ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಪಟ್ಟಣದ ಮುಖ್ಯರಸ್ತೆಯಲ್ಲಿ ಸಿಕ್ಕ ಚಿನ್ನದ ಚೈನ್‌ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಇಲ್ಲಿಯ ವಾಸವಿ ಮೊಬೈಲ್‌ ಶಾಪ್‌ನ ಕಾರ್ಮಿಕ ರಂಗನಾಥ್‌ ಅವರನ್ನು ಈಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಸನ್ಮಾನಿಸಿದರು.

ಅವರು ಗುರುವಾರ ಸಂಜೆ ಕೆಲಸದ ನಿಮಿತ್ತ ತಾಲ್ಲೂಕು ಕಚೇರಿಗೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಮುಖ್ಯರಸ್ತೆ ಪಕ್ಕದಲ್ಲಿ ಚಿನ್ನದ ಚೈನ್‌ ಸಿಕ್ಕಿತ್ತು. ಆಗ ಸ್ಥಳದಲ್ಲಿದ್ದ ಜನರಿಗೆ ತೋರಿಸಿ ವಾರಸುದಾರರ ಬಗ್ಗೆ ವಿಚಾರಿಸಿದರು. ಚೈನ್ ಯಾರದೆಂಬುದು ಅಂತ ತಿಳಿಯಲಿಲ್ಲ. ಆದ್ದರಿಂದ ವಾರಸುದಾರರನ್ನು ಪತ್ತೆ ಮಾಡಿ ಸದರಿ ಚೈನ್‌ ಕೊಡಿ ಅಂತ ಪೊಲೀಸ್‌ ಠಾಣೆಗೆ ತಂದುಕೊಟ್ಟರು.
ನಂತರ ಠಾಣೆಗೆ ಪಂಚರು ಮತ್ತು ಚಿನ್ನದ ಕೆಲಸ ಮಾಡುವವರನ್ನು ಕರೆಯಿಸಿ ತೂಕ ಮಾಡಿಸಲಾಗಿ ಮಿಕ್ಸ್ ಡಿಸೈನಿನ 12 ಗ್ರಾಂ ತೂಕದ ಚಿನ್ನದ ಚೈನ್ ಆಗಿತ್ತು.

ಬೆಲೆ ಸುಮಾರು ₹ 45,000 ಎಂದು ಆಂದಾಜಿಸಲಾಗಿದ್ದು. ಇದನ್ನು ಠಾಣೆಯ ಮಾಲು ಪಟ್ಟಿಯಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದ ಆದೇಶದಂತೆ ಚಿನ್ನದ ಚೈನಿನ ಮಾಲೀಕರು ಸಿಗುವವರೆಗೂ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ತನಿಖೆ ಕೈಗೊಳ್ಳಲಾಗಿದೆ. ರಂಗನಾಥ್‌ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.