ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತರಳಬಾಳು ಹುಣ್ಣಿಮೆ’ ಉತ್ಸವ ಇಂದಿನಿಂದ

Last Updated 14 ಫೆಬ್ರುವರಿ 2022, 7:52 IST
ಅಕ್ಷರ ಗಾತ್ರ

ಸಿರಿಗೆರೆ: ಇಲ್ಲಿನ ತರಳಬಾಳು ಬೃಹನ್ಮಠದಲ್ಲಿಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿಫೆ.14ರಿಂದ 16ರವರೆಗೆ ‘ತರಳಬಾಳು ಹುಣ್ಣಿಮೆ’ ಉತ್ಸವ ನಡೆಯಲಿದೆ.

ಶ‍್ರೀಮಠದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಸಂಗಮದ ‘ಹುಣ್ಣಿಮೆ’ ಕಾರ್ಯಕ್ರಮ ಕೋವಿಡ್‌ ಕಾರಣಕ್ಕೆ ಒಂಬತ್ತು ದಿನಗಳ ಬದಲಾಗಿ ‌ಮೂರು ದಿನ ನಡೆಯಲಿದೆ. ಮಠದ ಗುರುಶಾಂತೇಶ್ವರ ಭವನದ ಎದುರು ವೇದಿಕೆ ಸಜ್ಜಾಗಿದೆ. ವೇದಿಕೆ ಮುಂಭಾಗದಲ್ಲಿ ಸಮಾರಂಭ ವೀಕ್ಷಿಸಲು ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಸರಳವಾಗಿ ನಡೆಯುತ್ತಿದ್ದರೂ ಸ್ವಾಮೀಜಿ ಅವರ ಸಿಂಹಾಸನಾರೋಹಣ ದಿನ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ.

ವಿಚಾರಗೋಷ್ಠಿ, ಮಲ್ಲಕಂಬ, ಜಡೆಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜನಪದನೃತ್ಯ ಸೇರಿಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಲಿವೆ.ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಾಲದ ‘ಚಿತ್ರಪಟಲ’ ಆಕರ್ಷಿಸಲಿದೆ.

ಭಕ್ತರಿಂದ ಈಗಾಗಲೇ ದೇಣಿಗೆಯ ಮಹಾಪೂರ ಹರಿದುಬಂದಿದೆ.ಪಾಯಸ, ಲಾಡು, ಅನ್ನ, ಸಾಂಬಾರ್, ಉಪ್ಪಿನಕಾಯಿ, ಕಡಲೆಕಾಳು, ಬದನೆಕಾಯಿ ಪಲ್ಯದ ಪ್ರಸಾದದ ವ್ಯವಸ್ಥೆ ನಡೆಯುತ್ತಿದೆ.ಭಕ್ತರು ‌ಮಾಸ್ಕ್‌ ಧರಿಸಿ ಅಂತರಕಾಪಾಡಿಕೊಳ್ಳಬೇಕು.ಕಾರ್ಯಕ್ರಮವನ್ನು ‘Taralabalu Mutt Sirigere’ ಯೂಟ್ಯೂಬ್ ಚಾನಲ್ ಮೂಲಕವೂ ವೀಕ್ಷಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT