ಚಿತ್ರದುರ್ಗ: ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ಹುಂಡಿ ಕಳವು ಮಾಡಲು ದುಷ್ಕರ್ಮಿಗಳು ಭಾನುವಾರ ರಾತ್ರಿ ಪ್ರಯತ್ನಿಸಿದ್ದಾರೆ.

ಹೊರಮಠದ ಹುಂಡಿ ಕಾಣೆಯಾದ ಬಗ್ಗೆ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸಮೀಪದ ನಿರ್ಜನ ಪ್ರದೇಶಕ್ಕೆ ಹುಂಡಿ ಕೊಂಡೊಯ್ದು ಒಡೆಯಲು ಪ್ರಯತ್ನಿಸಿದ್ದಾರೆ.

ಹುಂಡಿಯನ್ನು ಒಡೆಯಲು ಸಾಧ್ಯವಾಗದೇ ಕಾಲ್ಕಿತ್ತಿದ್ದಾರೆ. ನಾಯಕನಹಟ್ಟಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದೇವಾಲಯಕ್ಕೆ ಮೂರು ಬಾಗಿಲುಗಳಿದ್ದು , ಎರಡು ಬಾಗಿಲುಗಳಿಗೆ ಒಳಗಡೆಯಿಂದ ಬೀಗ ಹಾಕುವ ವ್ಯವಸ್ಥೆ ಇದೆ. ಮುಖ್ಯದ್ವಾರದಲ್ಲಿ ಮಾಸ್ಟರ್ ಕೀ ಲಾಕ್ ಇರುತ್ತದೆ. ಹಾಗಾಗಿ ಕಳ್ಳರ ಗುಂಪು ದೇವಾಲಯದ ಸುಮಾರು12ಅಡಿ ಎತ್ತರದ ಕಾಂಪೌಂಡ್ ಗೋಡೆ ಮೇಲೆ ಹತ್ತಿ ಬಂದು ದೇವಾಲಯವನ್ನು ಪ್ರವೇಶಿಸಿದ್ದಾರೆ. ಇದೇವೇಳೆ ಅವರು ಒಳ ಪ್ರವೇಶಿಸುವ ಮಾರ್ಗದ ಸಿಸಿ ಕ್ಯಾಮರಾವನ್ನು ಹಾಳು ಮಾಡಿದ್ದಾರೆ.

ದೇವಾಲಯದ ಒಳಬಂದು ಒಂದು ಉಪ ದ್ವಾರದ ಬೀಗ ಮುರಿದು ಹುಂಡಿಯನ್ನು ಆ ಬಾಗಿಲಿನ ಮೂಲಕ ದೇವಾಲಯದ ಉದ್ಯಾನವನಕ್ಕೆ ತಂದು ಕಲ್ಲು ಗುಂಡುಗಳನ್ನು ಎತ್ತಿಹಾಕಿ ಹುಂಡಿ ಎಂದರೆ ತೆರೆದು ಹಣವನ್ನು ದೋಚಿದ್ದಾರೆ.

ಒಬ್ಬರಿಂದ ಕೃತ್ಯ ಸಾಧ್ಯವಿಲ್ಲ :ಸುಮಾರು 150 ಕೆಜಿ ಭಾರದ ಹುಡಿಯನ್ನು ಒಬ್ಬಿಬ್ಬರಿಂದ ಹೊತ್ತೊಯಲು ಸಾದ್ಯವಿಲ್ಲ. ನಾಲ್ಕರಿಂದ ಐದುಜನರ ಗುಂಪು ಸೇರಿ ಕೃತ್ಯ ನಡೆಸಿದ್ದಾರೆ. ಜತೆಗೆ ಗರ್ಭಗುಡಿಯ ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ದೇವಾಲಯದಲ್ಲಿರುವ ನಾಲ್ಕರಿಂದ ಐದು ಸಿಸಿ ಕ್ಯಾಮರಾಗಳ ಮೂಲಕ ಕಳ್ಳರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುವುದು ಎಂದು ಸ್ಥಳ ಪರಿಶೀಲನೆ ನಡೆಸಿದ ಎಎಸ್ ಐ ಶ್ರೀಧರ್ ತಿಸಿದರು.

ತಿಪ್ಪೇರುದ್ರಸ್ವಾಮಿ ದೇವಾಲಯವು ರಾಜ್ಯ ಮುಜರಾಯಿ ಇಲಾಖೆಯಲ್ಲಿ ಎ ಗ್ರೇಡ್ ಮಾನ್ಯತೆಯನ್ನು ಹೊಂದಿದೆ. ವಾರ್ಷಿಕ ₹1.50 ಕೋಟಿಯಿಂದ ₹2 ಕೋಟಿ ಆದಾಯವನ್ನು ಈ ದೇವಸ್ಥಾನ ಹೊಂದಿದೆ.

ಹೊರಮಠದಲ್ಲಿ ವಾರ್ಷಿಕ ₹20 ಲಕ್ಷದಿಂದ30 ಲಕ್ಷ ಹಣ ಹುಂಡಿಯಿಂದಲೇ ಸಂಗ್ರಹವಾಗುತ್ತದೆ. ಮಾರ್ಚ್ ತಿಂಗಳಲ್ಲಿ ನಡೆಯುವ ವಾರ್ಷಿಕ ಮಹಾಜಾತ್ರೆಯ ನಂತರ ಏಪ್ರಿಲ್ ತಿಂಗಳಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.