ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯ 60 ದಿನಗಳಲ್ಲಿ ₹ 21 ಲಕ್ಷ ಸಂಗ್ರಹ

ಕೋವಿಡ್‌ ನಡುವೆಯೂ ಉತ್ತಮ ಆದಾಯಗಳಿಸಿದ ತಿಪ್ಪೇರುದ್ರಸ್ವಾಮಿ ದೇವಾಲಯ
Last Updated 4 ನವೆಂಬರ್ 2020, 3:28 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹುಂಡಿಹಣ ಏಣಿಕೆ ಕಾರ್ಯ ನಡೆಸಿದರು.

60 ದಿನಗಳಲ್ಲಿ ಹೊರಮಠದಲ್ಲಿ ₹ 3,82,485 ಹಾಗೂ ಒಳಮಠದಲ್ಲಿ ₹ 17,72,915 ಸೇರಿ ಒಟ್ಟು ₹21,55,400 ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ಸಮಯಕ್ಕೆ ಎಣಿಕೆ ಕಾರ್ಯ ಮಾಡಿದಾಗ ಎರಡು ದೇವಾಲಯಗಳಿಂದ ಹುಂಡಿ ಹಾಗೂ ವಿವಿಧ ಸೇವಾರ್ಥಗಳಿಂದ ₹25,54,958 ಸಂಗ್ರಹವಾಗಿತ್ತು. ಲಾಕ್‌ಡೌನ್ ಘೋಷಿಸಿದ ಕಾರಣ ಎರಡೂ ದೇವಾಲಯಗಳನ್ನು ಮಾರ್ಚ್ 23ರಿಂದ ಬಾಗಿಲು ಮುಚ್ಚಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 19ರಂದು ವಾರ್ಷಿಕ ಮಹಾಜಾತ್ರೆ ನಡೆದಿತ್ತು.

ಮೇ 6ರಂದು ಲಾಕ್‌ಡೌನ್ ವೇಳೆ ಹುಂಡಿ ತೆರೆದಾಗ ₹ 30,03,743 ಹಣ ಸಂಗ್ರಹವಾಗಿತ್ತು. ನಂತರ ಆ. 31ರವರೆಗೂ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಸೆ.1ರಂದು ದೇವಾಲಯವನ್ನು ತೆರೆದು ಪೂಜೆಗಳು ಆರಂಭಗೊಂಡವು. ಸುಮಾರು 60 ದಿನಗಳಲ್ಲಿ ₹ 21 ಲಕ್ಷ ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್ ಹೇಳಿದರು.

ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಉಪತಹಶೀಲ್ದಾರ್ ಟಿ.ಜಗದೀಶ್, ಕಂದಾಯ ನಿರೀಕ್ಷಕ ಚೇತನ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಉಮಾ, ಪುಷ್ಪ ಲತಾ, ಸಂತೋಷ್, ಮಂಜುನಾಥ್, ಶಿವ ಮೂರ್ತಿ, ಎಂ.ಬಿ.ಮಹಾಸ್ವಾಮಿ, ಪುರಂದರ್, ವೀರಭದ್ರಪ್ಪ, ಪ್ರಸನ್ನ ಕುಮಾರ್, ಎಸ್.ಸತೀಶ್, ವಿರೂಪಾಕ್ಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT