ಮಂಗಳವಾರ, ಮೇ 17, 2022
26 °C

ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಇಲ್ಲಿನ ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಸಿಡಿ ಮರೋತ್ಸವ ವೈಭವದಿಂದ ನೆರವೇರಿತು.

ಬುಧವಾರ ಕೈವಾಡಸ್ಥರ ಮೊದಲ ಸಿಡಿ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿತು.

ಬೆಳಿಗ್ಗೆಯಿಂದಲೇ ಸಿಡಿ ಮರ ಏರುವವರು ಮೈಯಿಗೆ ಗಂಧ ಲೇಪನ ಹಾಕಿಸಿಕೊಂಡು ಗ್ರಾಮದಲ್ಲಿ ವಿವಿಧ ವಾದ್ಯಗಳೊಂದಿಗೆ ಕುಣಿಯುತ್ತಾ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡರು. ಸಂಜೆ 5ಕ್ಕೆ ಮೊದಲು ದೇವರ ಪಲ್ಲಕ್ಕಿಯನ್ನು ಸಿಡಿ ಮರಕ್ಕೆ ಕಟ್ಟಿ ಪೂಜೆ ಸಲ್ಲಿಸಿ ಮರ ಏರಿಸಿದರು.

ಆನಂತರ ಧರ್ಮಪುರದ ಆದಿ ಕರ್ನಾಟಕ ಮನೆತನದವರು ಮೊದಲ ಸಿಡಿ ನಡೆಸಿದರು. ಧರ್ಮಪುರದ ಅಭಿ ಎನ್ನುವ ಯುವಕ ಸಿಡಿ ಮರ ಏರುವ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದಾಗ ಜಾತ್ರೆಗೆ ಬಂದಿದ್ದ ಸಾವಿರಾರು ಜನರು ಹರ್ಷೋದ್ಗಾರ, ಚಪ್ಪಾಳೆ, ಸಿಳ್ಳೆ ಹಾಕಿ ಕೂಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.