ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಬ್ಬಗಳ ಆಚರಣೆಯಲ್ಲಿ ಸಾಮರಸ್ಯ ಅಗತ್ಯ'

Last Updated 5 ಸೆಪ್ಟೆಂಬರ್ 2013, 8:33 IST
ಅಕ್ಷರ ಗಾತ್ರ

ಚಳ್ಳಕೆರೆ: ಎಲ್ಲಾ ಸಮುದಾಯದವರು ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಸಿಪಿಐ ಮಂಜುನಾಥ ತಳವಾರ ಹೇಳಿದರು.

ಪಟ್ಟಣದ ರೋಟರಿ ಬಾಲಭವನದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ  ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

36ವರ್ಷಗಳಿಂದ ಪಟ್ಟಣದಲ್ಲಿ ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿರುವ ದಿವ್ಯಜ್ಯೋತಿ ಗಣಪತಿ ಸಂಘದ ಕಾರ್ಯಕರ್ತರು, ಈ ಭಾರಿಯೂ ಉತ್ತಮ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿದಿನ ಇಲ್ಲಿ ನಡೆಯುವ ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಅಗತ್ಯ ನೆರವು ನೀಡಲಿದೆ ಎಂದು ನುಡಿದರು.

ಪುರಸಭೆ ವತಿಯಿಂದ ಸೂಚಿಸಿರುವ ಸ್ಥಳದಲ್ಲೇ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು. ಮೆರವಣಿಗೆಯಲ್ಲಿ ಪಟಾಕಿ ಸೇರಿದಂತೆ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುವುದನ್ನು ತಡೆಯಲು ಸಂಘದ ವ್ಯವಸ್ಥಾಪಕರು ಹೆಚ್ಚಿನ ಗಮನ ನೀಡಬೇಕು ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಟಿ.ತಿಪ್ಪೇಶ್, ಪುರಸಭೆ ಸದಸ್ಯ ಎಂ.ಶಿವಮೂರ್ತಿ, ಮಾಜಿ ಸದಸ್ಯರಾದ ಸೈಯ್ಯದ್, ಪ್ರಸನ್ನ ಕುಮಾರ್, ರಾಜಣ್ಣ, ನಾಗರಾಜ ಶೆಟ್ಟಿ  ಮಾತನಾಡಿದರು.

ಶಾಂತಿಸಭೆಯಲ್ಲಿ ಪಿಎಸ್‌ಐ ಎನ್.ತಿಮ್ಮಣ್ಣ, ಡಿ.ಜಿ.ಶ್ರೀನಿವಾಸ್, ರಾಘವೇಂದ್ರ ಇದ್ದರು.

ಶಾಂತಿ ಸಭೆ
ಭರಮಸಾಗರ: ಜನರ ಭಾವನೆಗಳಿಗೆ ನೋವಾಗದಂತೆ ಸೌಹಾರ್ದ ಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಎಸ್‌ಐ ಪ್ರಕಾಶ್‌ಪಟೇಲ್ ತಿಳಿಸಿದರು.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಇಲ್ಲಿನ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸಕ್ಲೇನ್‌ಪಾಷ, ದುರ್ಗೇಶ್, ಕರಿಬಸಪ್ಪ, ಜಯ ಭಾರತ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸೂರಪ್ಪ, ಗ್ರಾಮ ಪಂಚಾಯ್ತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT