ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆ ಹಿಂಪಡೆಯಲು ಕಾಂಗ್ರೆಸ್ ಆಗ್ರಹ

Last Updated 21 ಡಿಸೆಂಬರ್ 2019, 10:36 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂವಿಧಾನದ ಆಶಯಗಳಿಗೆವಿರುದ್ಧವಾಗಿರುವಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಕೇಂದ್ರ ಗೃಹ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಕೋಟ್ಯಂತರ ಯುವಕರು ಕೆಲಸವಿಲ್ಲದೆಬೀದಿಗೆ ಬಂದಿದ್ದಾರೆ.ಸಾವಿರಾರು ಕಾರ್ಖಾನೆಗಳುಬಾಗಿಲು ಮುಚ್ಚುತ್ತಿವೆ. ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ಜಿಡಿಪಿ ದರ ಹಿಂದೆಂದೂ ಕಂಡರಿಯದಷ್ಟು ಪಾತಾಳಕ್ಕಿಳಿದಿದೆ. ದಿನಬಳಕೆಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಈರುಳ್ಳಿ, ಬೆಳ್ಳುಳ್ಳಿ, ಬೇಳೆಕಾಳು ದರಗಳು ಗಗನಕ್ಕೇರಿವೆ. ಜನ ಸಂಕಷ್ಟಅನುಭವಿಸುತ್ತಿರುವಾಗ ಕೇಂದ್ರ ಸರ್ಕಾರ ಜನರ ಗಮನ ಬೇರೆ ಕಡೆ ಸೆರಳೆಯಲುಸಂವಿಧಾನ ವಿರೋಧಿ ಕಾಯ್ದೆ ಜಾರಿಗೆ ತಂದಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾ, ಆಘ್ಘಾನಿಸ್ತಾನ, ಪಾಕಿಸ್ತಾನಗಳಿಂದಬಂದಜನರಿಗೆ ಪೌರತ್ವ ನೀಡಿದರೆ ಉದ್ಯೋಗ, ಆಹಾರ ಸಮಸ್ಯೆ, ವಸತಿ ಸಮಸ್ಯೆ ಹೆಚ್ಚಾಗಲಿದೆ. ಈಗಾಗಲೇ ಪ್ರಧಾನಿ ಮೋದಿ ಸರ್ಕಾರಉದ್ಯೋಗ, ಆಹಾರ, ಆರ್ಥಿಕ ಸ್ಥಿರತೆ, ಆಡಳಿತ ಕ್ಷೇತ್ರಗಳಲ್ಲಿ ವಿಫಲವಾಗಿದೆ.ಜನರ ದಿಕ್ಕು ತಪ್ಪಿಸಲೆಂದೇಸಿಎಎ, ಎನ್ಆರ್‌ಸಿಕಾಯ್ದೆ ಜಾರಿಗೊಳಿಸಿದೆ. ದೇಶದ ಪ್ರಜೆಗಳಲ್ಲಿ ಗೊಂದಲಮೂಡಿಸುತ್ತಿದೆಎಂದು ಆರೋಪಿಸಿದರು.

ದೇಶದ ಎಲ್ಲೆಡೆ ಕಾಯ್ದೆಗೆ ಭಾರಿವಿರೋಧ ವ್ಯಕ್ತವಾಗುತ್ತಿದೆ.ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಜನರಿಗೆಅಗತ್ಯವಿಲ್ಲದ ಇಂತಹ ಕಾನೂನು ಜಾರಿಗೆ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ.ಕಾಯ್ದೆಯನ್ನು ತಕ್ಷಣ ರದ್ದು ಮಾಡಬೇಕು.ಭಯದ ವಾತಾವರಣ ಸೃಷ್ಟಿಸಲು ಕಾರಣವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಪಡೆಯಬೇಕು ಎಂದುಒತ್ತಾಯಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕವಿಭಾಗದ ಅಧ್ಯಕ್ಷ ಸಯ್ಯದ್ ಮುಜೀಬುಲ್ಲಾ, ಕವಿತಾಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT