ಸಂವಿಧಾನ ಸುಟ್ಟವರ ಗಡಿಪಾರಿಗೆ ಒತ್ತಾಯ

7

ಸಂವಿಧಾನ ಸುಟ್ಟವರ ಗಡಿಪಾರಿಗೆ ಒತ್ತಾಯ

Published:
Updated:
Deccan Herald

ಸಿಂದಗಿ: ‘ನವದೆಹಲಿಯ ಜಂತರ್‌–ಮಂತರ್‌ ಮೈದಾನದಲ್ಲಿ ದೇಶದ ಸಂವಿಧಾನ ಸುಟ್ಟು ಹಾಕಿ ದೇಶದ್ರೋಹ ಎಸಗಿದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ ದಲಿತ ಮತ್ತು ಮೈನಾರಿಟಿ ಸೇನೆ ನೇತೃತ್ವದಲ್ಲಿ ಕಾರ್ಯಕರ್ತರು ಶನಿವಾರ ಇಲ್ಲಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸೇನೆ ರಾಜ್ಯಘಟಕದ ಉಪಾಧ್ಯಕ್ಷ ಮೈಬೂಬ ಸಿಂದಗಿಕರ, ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ಬಿಸನಾಳ, ದಲಿತ ಮುಖಂಡ ಅಶೋಕ ಸುಲ್ಪಿ ಮಾತನಾಡಿ, ‘ಆಗಸ್ಟ್ 10ರಂದು ಮೀಸಲಾತಿ ಮತ್ತು ಎಸ್.ಸಿ/ಎಸ್.ಟಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಿಡಿಗೇಡಿಗಳು ದೇಶದ ಸಂವಿಧಾನ ಸುಟ್ಟು ಹಾಕಿ ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವ ಕುಕೃತ್ಯ ಎಸಗಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ದ 'ಭಾರತ ಕಾ ಸಂವಿಧಾನ ಜಲಾವೋ ಹಿಂದುಸ್ತಾನ್‌ ಬಚಾವೊ' ಎಂಬ ಘೋಷಣೆ ಕೂಗಿ ಅವಮಾನಗೊಳಿಸಿದ್ದಾರೆ. ಈ ಘಟನೆ ಅತ್ಯಂತ ಖಂಡನೀಯವಾದುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಪೊಲೀಸರ ಸಮ್ಮುಖದಲ್ಲೇ ಈ ಹೀನ ಕೃತ್ಯ ನಡೆದಿರುವುದು ಇನ್ನಷ್ಟು ದುರದೃಷ್ಟಕರ ಸಂಗತಿ’ ಎಂದು ವಿಷಾದಿಸಿದರು.

ಸೇನೆ ಯುವ ಘಟಕದ ಜಿಲ್ಲಾ ಅಧ್ಯಕ್ಷ ಇರ್ಫಾನ್ ಆಳಂದ, ತಾಲ್ಲೂಕು ಅಧ್ಯಕ್ಷ ಅಮೋಗಿ ತಳವಾರ, ತಾಲ್ಲೂಕು ಕಾರ್ಯಾಧ್ಯಕ್ಷ ಮುನ್ನಾ ಖೇಡ, ಹರ್ವವರ್ಧನ ಪೂಜಾರಿ, ರಾಜೂ ಗುಬ್ಬೇವಾಡ, ಜಯಶ್ರೀ ಹದನೂರ, ಸಂಜನಾ ಭಜಂತ್ರಿ, ನಬಿ ಆಲಗೂರ, ರಷೀದ್ ಕುಮಸಗಿ, ರಾಕೇಶ ಕಾಂಬಳೆ, ಸದ್ದಾಂ, ರಫೀಕ್‌ ನದಾಫ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಕಂದಾಯ ಇಲಾಖೆ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !