ಐಫೋನ್ ನೀಡಿರುವುದೇ ಸರ್ಕಾರ: ಆಯನೂರು

7

ಐಫೋನ್ ನೀಡಿರುವುದೇ ಸರ್ಕಾರ: ಆಯನೂರು

Published:
Updated:

ಶಿವಮೊಗ್ಗ: ರಾಜ್ಯದ ಸಂಸದರಿಗೆ ಕೊಡುಗೆಯಾಗಿ ನೀಡಿದ ಐಫೋನ್ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರತಿಪಾದಿಸಿದರು.

ಸಂಸದರಿಗೆ ಮೊಬೈಲ್ ಫೋನ್ ಕೊಡುಗೆ ನೀಡಿದ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರವೇ ಇದನ್ನು ಕೊಟ್ಟಿದೆ. ಈಗ ಮುಖ್ಯಮಂತ್ರಿ ರಕ್ಷಣೆ ಮಾಡಲು ಸಚಿವ ಡಿ.ಕೆ. ಶಿವಕುಮಾರ್ ತಾವೇ ಕೊಡುಗೆ ನೀಡಿರುವುದಾಗಿ ಹೇಳುತ್ತಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ದೆಹಲಿಯ ಕರ್ನಾಟಕ ಭವನ ಸರ್ಕಾರದ ಸ್ವತ್ತು. ಅಲ್ಲಿನ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡು ಸಂಸದರಿಗೆ ಕೊಡುಗೆ ವಿತರಿಸಲಾಗಿದೆ. ಅಧಿಕಾರಿಗಳು ಸರ್ಕಾರದ ಅಂಗ. ಮೊಬೈಲ್ ಫೋನ್ ವಿತರಿಸಲು ಅವರು ಡಿ.ಕೆ. ಶಿವಕುಮಾರ್ ಮನೆ ಆಳುಗಳೇ ಎಂದು ಪ್ರಶ್ನಿಸಿದರು.

ಸಚಿವ ಜಮೀರ್ ಆಹಮದ್ ಸದನದಲ್ಲಿ ಹೇಳಿದಂತೆ ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಸರ್ಕಾರ ಹಾಗೂ ಸಚಿವರ ಮೇಲೆ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಬಿಳಕಿ ಕೃಷ್ಣಮೂರ್ತೀ, ಜ್ಞಾನೇಶ್ವರ್, ಎಚ್.ಸಿ. ಬಸವರಾಜಪ್ಪ, ಸತ್ಯನಾರಾಯಣ್, ಮಧುಸೂದನ್, ಭವಾನಿ ರಾವ್ ಮೋರೆ, ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !