ಶಿಕಾರಿಪುರ: ಭಾರತ್‌ ಬಂದ್‌ಗೆ ಸಹಕರಿಸಿ–ಬ್ಲಾಕ್‌ ಕಾಂಗ್ರೆಸ್ ಮನವಿ

7

ಶಿಕಾರಿಪುರ: ಭಾರತ್‌ ಬಂದ್‌ಗೆ ಸಹಕರಿಸಿ–ಬ್ಲಾಕ್‌ ಕಾಂಗ್ರೆಸ್ ಮನವಿ

Published:
Updated:
Deccan Herald

ಶಿಕಾರಿಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇದೇ 10ರಂದು ಕಾಂಗ್ರೆಸ್‌ ಕರೆ ನೀಡಿರುವ  ಭಾರತ್‌ ಬಂದ್‌ಗೆ ಪಟ್ಟಣದ ನಾಗಕರಿಕರು ಸಹಕರಿಸಬೇಕು’ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್‌ ಮನವಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಹಾಗೂ ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ಸುಳ್ಳು ಭರವಸೆ ನೀಡುವ ಮೂಲಕ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ’ ಎಂದು ಟೀಕಿಸಿದರು.

‘ಕ್ಷೇತ್ರದ ಶಾಸಕ ಬಿ.ಎಸ್‌. ಯಡಿಯೂರಪ್ಪ ತಾಲ್ಲೂಕಿನ ಜನರ ಸಮಸ್ಯೆ ಸ್ಪಂದಿಸುವ ಬದಲು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಸರ್ಕಾರ ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ರೈತರ ಸಾಲ ಮಾಡಿದೆ. ಆದರೆ ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿಸುವ ಕಾರ್ಯವನ್ನು ಯಡಿಯೂರಪ್ಪ ಮಾಡಿಲ್ಲ’ ಎಂದು ಟೀಕಿಸಿದರು.

‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ‘ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಪರ ಆಡಳಿತ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡದೇ, ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ’ ಎಂದು ಟೀಕಿಸಿದರು.

ಮುಖಂಡರಾದ ಪಾರಿವಾಳ ಶಿವರಾಮ್‌, ಇದ್ರೂಸ್‌ಸಾಬ್‌, ಬುಡೇನ್‌ಖಾನ್‌, ಭಂಡಾರಿ ಮಾಲತೇಶ್‌, ಸೈಯದ್‌ ಹಬೀಬುಲ್ಲಾ, ರಾಘು ನರಸಿಂಗನಾಯ್ಕ, ಗೋಪಾಲ್‌, ಜೀನಳ್ಳಿ ದೊಡ್ಡಪ್ಪ, ಜಿದ್ದು ಮಂಜು, ಎಂ. ಸಂದೀಪ್‌, ಸಿಂಚು, ಕೆ.ವಿ. ಪ್ರಕಾಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !