ಆಟೊರಿಕ್ಷಾ ಚಾಲಕನ ಮೇಲೆ ಹಲ್ಲೆ

7

ಆಟೊರಿಕ್ಷಾ ಚಾಲಕನ ಮೇಲೆ ಹಲ್ಲೆ

Published:
Updated:

ಶಿವಮೊಗ್ಗ: ಸರಕು ಸಾಗಣೆ ಆಟೊರಿಕ್ಷಾ ಬಾಡಿಗೆಗೆ ಪಡೆದಿದ್ದ ಇಬ್ಬರು ಆರೋಪಿಗಳು ಬುಧವಾರ ರಾತ್ರಿ ಶಾರದಾ ಅಂಧರ ಶಾಲೆಯ ಹತ್ತಿರ ಚಾಲಕನ ಮೇಲೆ ಹಲ್ಲೆ ನಡೆಸಿ, ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಹೊಳಲೂರಿನ ಮನ್ಸೂರ್ (35) ಹಲ್ಲೆಗೆ ಒಳಗಾದವರು.

ಕಣ್ಣಿಗೆ ಕಾರದ ಪುಡಿ ಎರಚಿ, ಬ್ಲೇಡಿನಿಂದ ಮೈ, ಕೈ ಕೊಯ್ದಿದ್ದಾರೆ. ನಂತರ ಅವರ ಬಳಿ ಇದ್ದ ₨ 13 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದೆ.

ಹಮಾಲಿ ಕಾರ್ಮಿಕನಿಗೆ ಇರಿತ

ಶಿವಮೊಗ್ಗ: ಹಮಾಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಕಾರ್ಮಿಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮದಾರಿಪಾಳ್ಯದ ಬಳಿ ಚಾಕುವಿನಿಂದ ಇರಿದಿದ್ದಾರೆ. 

ಸೀಗೆಹಟ್ಟಿ ಆಶೀಕ್ ಹಲ್ಲೆಗೆ ಒಳಗಾದವರು. ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !