ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಅಡಿ ಎತ್ತರದ ಮಾನಸ್ತಂಭಕ್ಕೆ ಶಿಲಾನ್ಯಾಸ

ಪಂಜಿಕಲ್ಲು: ಆದಿನಾಥ ಸ್ವಾಮಿ ಜಿನ ಚೈತ್ಯಾಲಯ
Last Updated 14 ಡಿಸೆಂಬರ್ 2021, 4:41 IST
ಅಕ್ಷರ ಗಾತ್ರ

ಬಂಟ್ವಾಳ: ಪಾರಂಪರಿಕ ಜೈನ ಬಸದಿಗಳ ವೈಶಿಷ್ಟ್ಯತೆ ಉಳಿಸಿಕೊಂಡು 32 ಅಡಿ ಎತ್ತರದ ಏಕಶಿಲಾ ಮಾನಸ್ತಂಭ ಅಳವಡಿಸುವ ಮೂಲಕ ಜಿಲ್ಲೆಯ ಏಕೈಕ ಬಸದಿಯಾಗಿ ಪಂಜಿಕಲ್ಲು ಜಿನ ಚೈತ್ಯಾಲಯ ಮೂಡಿ ಬಂದಿದೆ ಎಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಪಂಜಿಕಲ್ಲು ಆದಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ 32 ಅಡಿ ಎತ್ತರದ ಮಾನಸ್ತಂಭಕ್ಕೆ ಭಾನುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಅರಳ ಗರುಡ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಭಾರತೀಯ ಜೈನ್ ಮಿಲನ್ ವಲಯಾಧ್ಯಕ್ಷ ಪುಷ್ಪರಾಜ್ ಜೈನ್, ಉದ್ಯಮಿ ರಾಜೇಂದ್ರ ಜೈನ್ ತುಮಕೂರು, ಮಂಗಳೂರು ನಿರ್ದೆಶಕ ಪ್ರಮೋದ್ ಕುಮಾರ್ ಶುಭ ಹಾರೈಸಿದರು.

ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ, ವಕೀಲ ದೀಪಕ್ ಕುಮಾರ್ ಜೈನ್, ಕಾರ್ಯದರ್ಶಿ ದೇವಕುಮಾರ್ ಇಂದ್ರ, ಪ್ರಮುಖರಾದ ಸರೋಜ ಜಿ.ಜೈನ್ ವೇಣೂರು, ಮಧುಶ್ರೀ ಜಿತೇಶ್, ಜ್ಯೋತ್ಸ್ನಾ ವೇಣೂರು, ಕೃಷ್ಣರಾಜ್ ಜೈನ್, ಡಾ.ಶ್ರೀಮಂದರ ಜೈನ್, ಚಂದ್ರಶೇಖರ, ಪ್ರಕಾಶ್ ಕುಮಾರ್ ಬೊಳ್ಳೋಡಿ, ಗೀತಾ ಜಿನಚಂದ್ರ, ಸತೀಶ ಪಡಿವಾಳ್ ಪುತ್ತೂರು ಇದ್ದರು.

ಇದೇ ವೇಳೆ ಶಿಲ್ಪಿ ಶ್ರೀನಿವಾಸ ಮತ್ತು ಗಜಲಕ್ಷ್ಮಿ ಕ್ರೇನ್ ಮುಖ್ಯಸ್ಥ ರಾಘವೇಂದ್ರ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ಹರ್ಷೆಂದ್ರ ಹೆಗ್ಡೆ ಅಂತರ ವಂದಿಸಿದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT