ವಿಟ್ಲ: ಕ್ವಾರಿಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕ್ಲೀನರ್ ಸಣ್ಣಪುಟ್ಟ ಗಾಯಗೊಂಡ ಘಟನೆ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.

ಕಾಸರಗೋಡು ಜಿಲ್ಲೆಯ ಬಳ್ಳೂರು ನಿವಾಸಿ ಮಹಮ್ಮದ್ ರಫೀಕ್ ಮೃತಪಟ್ಟ ಲಾರಿ ಚಾಲಕ. ಪುಣಚ ಸಮೀಪ ಇರುವ ಕ್ವಾರಿಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿ ಬಿದ್ದಿದೆ. ಚಾಲಕ ಟಿಪ್ಪರ್ ಕೆಳಗಡೆ ಹಲವು ಸಮಯಗಳ ವರೆಗೆ ಸಿಕ್ಕಿಹಾಕಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಲ್ಲಿ ಮೃತದೇಹ ಮೇಲೆತ್ತಲಾಯಿತು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಪುಣಚ ಸುತ್ತಮುತ್ತಲಿನಲ್ಲಿ ಹಲವು ಕಲ್ಲಿನ ಕ್ವಾರಿಗಳಿಂದ ಕೇರಳ ಕಡೆಗೆ ನಿರಂತರವಾಗಿ ಜಲ್ಲಿ ಸಾಗಾಟ ಮಾಡಲಾಗುತ್ತಿದೆ. ಜಲ್ಲಿ ಕಲ್ಲು ಸಾಗಾಟ ಮಾಡುವ ಲಾರಿಗಳು ಅತೀವೇಗವಾಗಿ ಸಂಚಾರ ಮಾಡುತ್ತವೆ. ಇದರಿಂದ ಪಾದಚಾರಿಗಳು, ಸಣ್ಣ ವಾಹನ ಚಾಲಕರು ಆತಂಕಪಡುವಂತಾಗಿದೆ. ರಫೀಕ್ನ ಮಗನಿಗೆ ಇದೇ ಭಾನುವಾರ ಮುಂಜಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.