ಮಂಗಳೂರಿನ ಗೋಪಾಡ್ಕರ್ ಮತ್ತು ಸುಮಂಗಲಾ ಸುಮಾಡ್ಕರ್ ದಂಪತಿಯ ಪುತ್ರಿ ಆದಿ ಸ್ವರೂಪ ಒಂದೂವರೆ ವರ್ಷದ ಮಗುವಾಗಿರುವಾಗಲೇ ಓದಲು ಆರಂಭಿಸಿದವರು. ಎರಡೂವರೆ ವರ್ಷದವಳಿರುವಾಗ ದಿನಕ್ಕೆ 30 ಪುಟ ಬರೆಯುತ್ತಿದ್ದ ಆದಿ ಸ್ವರೂಪ, ಎಸ್ಸೆಸ್ಸೆಲ್ಸಿ ಉತ್ತೀರ್ಣವಾಗಿದ್ದು ಕೂಡ, ಖಾಸಗಿ ವಿದ್ಯಾರ್ಥಿನಿಯಾಗಿ. ಸದ್ಯ, ಏಕಕಾಲಕ್ಕೆ ಎರಡೂ ಕೈಗಳಿಂದ ಹತ್ತಕ್ಕೂ ಹೆಚ್ಚು ವಿಭಿನ್ನ ಶೈಲಿಯಲ್ಲಿ ಬರೆಯುವ ಕಲೆ ಆದಿಸ್ವರೂಪಗೆ ಕರಗತವಾಗಿದೆ. ಈ ಕೌಶಲದ ಕಾರಣದಿಂದ 19ನೇ ವರ್ಷಕ್ಕೇ ಹಲವು ವಿಶ್ವದಾಖಲೆ ಬರೆದಿದ್ದಾರೆ ಆದಿ ಸ್ವರೂಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.