ಶುಕ್ರವಾರ, ಆಗಸ್ಟ್ 19, 2022
27 °C
ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಷನ್‌ನಿಂದ ಘೋಷಣೆ

ವಿಶ್ವ ದಾಖಲೆ ಬರೆದ ಆದಿ ಸ್ವರೂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಏಕಕಾಲದಲ್ಲಿ ಎರಡು ಕೈಗಳಿಂದ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಇಂಗ್ಲಿಷ್ ಪದಗಳನ್ನು ಬರೆಯುವ ವಿದ್ಯಾರ್ಥಿನಿ ಆದಿ ಸ್ವರೂಪಾಳ ಪ್ರತಿಭೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಷನ್, ಎಕ್ಸ್‌ಕ್ಲೂಸಿವ್ ವರ್ಡ್ ರೆಕಾರ್ಡ್ ದಾಖಲೆಯನ್ನು ಘೋಷಿಸಿದೆ.

ಇಲ್ಲಿನ ಕೊಡಿಯಾಲ್‌ಬೈಲ್ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಆದಿ ಸ್ವರೂಪಾ, ಎರಡೂ ಕೈಯಲ್ಲಿ ಸರಾಗವಾಗಿ ಬರೆಯುತ್ತಾಳೆ. ಎರಡು ವರ್ಷಗಳಲ್ಲಿ ಈಕೆ ಹತ್ತು ವಿಭಿನ್ನ ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಲಾಕ್‌ಡೌನ್‌ ಅವಧಿಯನ್ನು ಸದುಪಯೋಗಪಡಿಸಿಕೊಂಡು, ಇದರಲ್ಲಿ ತಜ್ಞತೆ ಪಡೆದಿದ್ದಾಳೆ ಎಂದು ಕೇಂದ್ರದ ಮುಖ್ಯಸ್ಥರೂ ಆಗಿರುವ ಈಕೆಯ ಪಾಲಕರಾದ ಗೋಪಾಡ್ಕರ್ ಮತ್ತು ಸುಮಾಡ್ಕರ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಂದೂವರೆ ವರ್ಷದ ಪುಟಾಣಿಯಾಗಿರುವಾಗಲೇ ಓದಲು ಆರಂಭಿಸಿದ ಆದಿ, ಎರಡೂವರೆ ವರ್ಷದವಳಿರುವಾಗ ದಿನಕ್ಕೆ 30 ಪುಟ ಬರೆಯುತ್ತಿದ್ದಳು. ಎಂದೂ ಶಾಲೆಗೆ ಹೋಗದೇ, ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿರುವ ಈಕೆ, ಈ ವರ್ಷ ಖಾಸಗಿ ವಿದ್ಯಾರ್ಥಿನಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎರಡೂ ಕೈಗಳಲ್ಲಿ ಬರೆಯಲು ಸಿದ್ಧತೆ ನಡೆಸಿದ್ದಾಳೆ’ ಎಂದು ವಿವರಿಸಿದರು.

ಹಿಂದೂಸ್ತಾನಿ ಸಂಗೀತ, ಗಿಟಾರ್, ಕೀಬೋರ್ಡ್ ಅಭ್ಯಾಸ ಮಾಡುತ್ತಾಳೆ. 10ನೇ ವರ್ಷದ ಜನ್ಮದಿನಕ್ಕೆ 40 ಕತೆಗಳ ಸಂಕಲನ ಬಿಡುಗಡೆಗೊಳಿಸಿದ್ದು, ಈಗ ಇಂಗ್ಲಿಷ್‌ನಲ್ಲಿ ಫ್ಯಾಂಟಸಿ ಕಾದಂಬರಿ ಬರೆಯುತ್ತಿದ್ದಾಳೆ. ಮಿಮಿಕ್ರಿ, ಬೀಟ್‌ಬಾಕ್ಸ್, ತ್ರಯೋದಶ ಅವಧಾನ ಕಲೆಯಲ್ಲಿ ಸೈ ಎನಿಸಿಕೊಂಡಿರುವ ಆದಿ, ಶೋಡಷ ಅವಧಾನ ‍ಪ್ರದರ್ಶಿಸಲು, ನಿತ್ಯ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.