ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಆಶ್ರಮವಾಸಿಗಳೊಂದಿಗೆ ಬಕ್ರಿದ್ ಆಚರಣೆ

Published 29 ಜೂನ್ 2023, 12:41 IST
Last Updated 29 ಜೂನ್ 2023, 12:41 IST
ಅಕ್ಷರ ಗಾತ್ರ

ಉಳ್ಳಾಲ: ‘ಆಶ್ರಮವಾಸಿಗಳ ಆಶೀರ್ವಾದದಿಂದ ವಿಧಾನಸಭಾಧ್ಯಕ್ಷ ಪೀಠ ಏರಲು ಸಾಧ್ಯವಾಗಿದೆ. ಪ್ರತಿ ವರ್ಷದ ಹಬ್ಬದಂದು ಹೆಲ್ಪ್‌ ಇಂಡಿಯ ಫೌಂಡೇಷನ್ ಒದಗಿಸಿಕೊಡುವ ಅವಕಾಶದಿಂದ ಎಲ್ಲರ ಜತೆಗೆ ಬೆರೆಯಲು ಸಾಧ್ಯವಾಗಿದೆ. ಆಶ್ರಮವಾಸಿಗಳನ್ನು ಸಲಹುವ ಜವಾಬ್ದಾರಿಯನ್ನು ಹೊತ್ತ ಸ್ಥಾಪಕರ ಕಾರ್ಯ ಶ್ಲಾಘನೀಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ಹೆಲ್ಪ್ ಇಂಡಿಯ ಫೌಂಡೇಶನ್ ಆಶ್ರಯದಲ್ಲಿ ಸೋಮೇಶ್ವರ ನೆಹರೂ ನಗರದ ಪಶ್ಚಿಮ್ ಚಾರಿಟಬಲ್ ಟ್ರಸ್ಟ್‌ನ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ಚೇತನ ಕೇಂದ್ರದ ವಾಸಿಗಳ ಜತೆಗೆ ಬಕ್ರೀದ್ ಆಚರಣೆ, ಬಿರಿಯಾನಿ ವಿತರಿಸಿ ಅವರು ಮಾತನಾಡಿದರು.

ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು.

ಹೆಲ್ಪ್ ಇಂಡಿಯಾ ಫೌಂಡೇಷನ್‌ ಸ್ಥಾಪಕ ರಾಝಿಕ್ ಉಳ್ಳಾಲ್, ಪಶ್ಚಿಮ್ ರಿಹಾಬ್ ಸೆಂಟರ್ ಸ್ಥಾಪಕ ರೋಹಿತ್ ಸಾಂಕ್ಟಸ್, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಉದ್ಯಮಿ ರಿಯಲ್ ಟೆಕ್ ಇಸ್ಮಾಯಿಲ್, ಮಹಮ್ಮದ್ ಸಿ.ಎಂ.ಉಚ್ಚಿಲ, ಉಳ್ಳಾಲ ನಗರಸಭೆಯ ಕೌನ್ಸಿಲರ್ ಅಜೀಝ್, ವಕೀಲ ಪ್ರಶಾಂತ್ ಭಟ್ ಕಡಬ, ಯುವ ಕಾಂಗ್ರೆಸ್ ಕಾರ್ಯಕರ್ತ ಅಬ್ದುಲ್ ಮಲಿಕ್ ಇದ್ದರು.

ಝಾಕೀರ್ ಇಕ್ಲಾಸ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT