ಮಂಗಳೂರು:‘ದೇಶ-ವಿದೇಶದಲ್ಲಿದ್ದುಕೊಂಡು ಸಮಾಜಮುಖಿ ಕೆಲಸ ಮಾಡುವ ಸಂಘಟನೆಗಳು ಸಮಾಜ ಮತ್ತು ಸಮುದಾಯಕ್ಕೆ ದೊಡ್ಡ ಶಕ್ತಿಯಾಗಿವೆ‘ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದೇಶದಲ್ಲಿ ನೆಲೆಸಿರುವ ಬ್ಯಾರಿಗಳು ತಮ್ಮ ಸಂಪಾದನೆಯ ಒಂದಂಶವನ್ನು ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುತ್ತಿದ್ದಾರೆ. ಇದರ ಪ್ರಯೋಜನ ಪಡೆದವರು ಬದುಕಿನ ಕೊನೆಯವರೆಗೂ ಸ್ಮರಿಸಬೇಕು’ ಎಂದರು.

ಹಜ್ ಸಚಿವ ರಹೀಂ ಖಾನ್, ‘ಶೈಕ್ಷಣಿಕವಾಗಿ ಕ್ರಾಂತಿಯನ್ನು ನಿರ್ಮಿಸಿರುವ ಮಂಗಳೂರಿನ ಮುಸ್ಲಿಮರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಹೈದರಾಬಾದ್ ಕರ್ನಾಟಕದ ಮುಸ್ಲಿಮರು ಅಭಿವೃದ್ಧಿಯಲ್ಲಿ ಹಿಂದುಳಿಯಲು ಶಿಕ್ಷಣದ ಕೊರತೆಯೂ ಕಾರಣ. ಸಂಘ ಸಂಸ್ಥೆಗಳು ಸರ್ಕರದ ಜೊತೆ ಕೈಜೋಡಿಸಿದರೆ ಜನರ ಅಭಿವೃದ್ಧಿ ಸುಲಭ’ ಎಂದರು.

ದಿ ನ್ಯಾಷನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ಇದರ ನೂತನ ಅಧ್ಯಕ್ಷ ಪ್ರೊ.ಡಾ.ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ಸ್ಪೆಷಲ್ ಅವಾರ್ಡ್ಸ್ ಆಫ್ ಅಪ್ರೆಶಿಯನ್ ಮತ್ತು ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕಿ ಕೌಸರ್ ನಿಸಾರ್ ಅವರಿಗೆ ಇಂಟರ್‌ನ್ಯಾಶನಲ್ ಹ್ಯುಮಾನಿಟಿರಿಯನ್ ಸರ್ವಿಸ್ ಪ್ರಶಸ್ತಿ, ಯುಎಇ ಗಡಿಯಾರ್ ಗ್ರೂಪ್‌ನ ಅಧ್ಯಕ್ಷ ಇಬ್ರಾಹೀಂ ಗಡಿಯಾರ್ ಅವರಿಗೆ ಇಬ್ನು ಬತೂತಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮುಹಮ್ಮದ್ ಝಿಯಾದ್, ತಸ್ನೀಂ ಎಸ್.ಎಂ. ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಹಲೀಮತ್ ಶಾಹಿಮಾ, ಮುಸ್ಕಾನ್ ಕೌಸರ್, ಆಯಿಶತುಲ್ ಸಫಾನಾ ಹಾಗೂ ಮದ್ರಸದ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 7ನೆ ತರಗತಿಯ ಫಾತಿಮಾ ಸಯೀದಾ, 10ನೆ ತರಗತಿಯ ಫಾತಿಮಾ ಝಹರಾ, 12ನೆ ತರಗತಿಯ ಅಶಾ ಆಯಿಶಾ ಅವರಿಗೆ ಬಿಸಿಎಫ್ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಯುಇಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ಮತ್ತು ಮನಾಲ್ ಕಾಪು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಸಿಕೊಟ್ಟರು.

ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿ ದರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ ಮತ್ತು ಬ್ಯಾರೀಸ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಸಿಸಿಐ) ಅಧ್ಯಕ್ಷ ಎಸ್. ಎಂ. ರಶೀದ್ ಶುಭ ಹಾರೈಸಿದರು. ಬಿಸಿಎಫ್ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು, ಬೆಂಗಳೂರಿನ ಲಿಟ್ಲ್ ಫ್ಲವರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕಿ ನಫೀಸಾ ಅಹ್ಮದ್ ಮತ್ತು ನಿರ್ದೇಶಕ ಸುಹೈಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್‌ನಾಸಿರ್ ಲಕ್ಕಿಸ್ಟಾರ್, ಉದ್ಯಮಿ ಕೆ. ಮುಹಮ್ಮದ್ ಹಾರಿಸ್, ಬಿಸಿಎಫ್ ಮಹಿಳಾ ಘಟಕದ ಅಧ್ಯಕ್ಷೆ ಮುಮ್ತಾಝ್, ಮೈಮುನಾ ಇಕ್ಬಾಲ್, ಝಾಹಿದಾ ಜಲೀಲ್, ಬಿಸಿಎಫ್ ಮುಖ್ಯ ಸಲಹೆಗಾರ ಅಬೂಸ್ವಾಲಿಹ್ ಹುಸೇನ್, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ಸತ್ತಿಕಲ್, ಹುಸೈನ್ ಸತ್ತಿಕ್ಕಲ್, ಉಸ್ಮಾನ್ ಮೂಳೂರು, ರಝಾಕ್ ದೇವ ಹಾಗೂ ಅಬ್ದುಲ್ಲಾ ಮಾದುಮೂಲೆ, ಕತರ್ ಅಬ್ದುಲ್ಲಾ ಮೋನು, ಸಿ.ಆರ್. ಅಬೂಬಕರ್, ಶೇಖಬ್ಬ ಕನ್ನಂಗಾರ್, ಮುಹಮ್ಮದ್ ಅಲಿ ಕಮ್ಮರಡಿ, ಬದ್ರುದ್ದೀನ್ ಪಣಂಬೂರು, ಸೈಯದ್ ಅಸ್ಲಂ, ಅಝೀಝ್ ಬೈಕಂಪಾಡಿ, ಇಮ್ತಿಯಾಜ್, ಬಿ.ಎ.ನಜೀರ್, ಶಾಹುಲ್ ಹಮೀದ್ ಭಾಗವಹಿಸಿದ್ದರು.

ಬಿಸಿಎಫ್ ಮುಖ್ಯ ಪೋಷಕ ಬಿ.ಎಂ. ಮುಮ್ತಾಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಪ್ರೊ.ಕಾಪು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.