ಬಂಟ್ವಾಳ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರು ಇಲ್ಲಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 75 ಹಾಸಿಗೆ ಬಟ್ಟೆ ರವಾನಿಸಿದ್ದಾರೆ.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮತ್ತು ಯೋಜನಾಧಿಕಾರಿ ಜಯಾನಂದ ಪಿ., ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ ಉಮೇಶ್ ಅಡ್ಯಂತಾಯ ಅವರಿಗೆ ಹಾಸಿಗೆ ಬಟ್ಟೆ ಹಸ್ತಾಂತರಿಸಿದರು.
ವೈದ್ಯರಾದ ಡಾ. ಅಕ್ಷತಾ ನಾಯಕ್, ಡಾ.ವಸುಧಾ, ಕಚೇರಿ ಮೇಲ್ವಿಚಾರಕ ಐವನ್ ಕುಟ್ಟಿನ್, ಪ್ರಮುಖರಾದ ಅಬ್ದುಲ್ ರಶೀದ್, ಸೌಮ್ಯಾ ಮಾಧವ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಸಿ. ಶ್ರೀಧರ್ ಪೈ, ಸದಸ್ಯರಾದ ನವೀನಚಂದ್ರ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಂಜನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.