ಬೆಳ್ತಂಗಡಿ: ತಾಲ್ಲೂಕಿನ ನಾರಾವಿ, ಕಾಶಿಪಟ್ಣ, ಕಡಿರುದ್ಯಾವರ, ನೆರಿಯ, ತೋಟತ್ತಾಡಿ, ಚಾರ್ಮಾಡಿ, ಕಕ್ಕಿಂಜೆ, ಬದ್ಯಾರು, ನಾಲ್ಕೂರು, ಬಳಂಜ, ಪಡಂಗಡಿ ಮೊದಲಾದ ಕಡೆಗಳಲ್ಲಿ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

ಉಳಿದ ಕಡೆ ಅಲ್ಲಲ್ಲಿ ಸಾಮಾನ್ಯ, ತುಂತುರು ಮಳೆ ಸುರಿದಿದೆ. ಹಲವೆಡೆ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಮಳೆಯಿಂದಾಗಿ ಒದ್ದೆಯಾಗಿದೆ. ಕೆಲವು ಕಡೆ ಗಾಳಿ ಬೀಸಿದ್ದು, ನೆರಿಯದ ಬಸ್ತಿ ಪರಿಸರದಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು 10ರಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್, ಇಂಟರ್ನೆಟ್ ಮಾರ್ಗಗಳು ಕಡಿತಗೊಂಡಿವೆ. ರಬ್ಬರ್, ಅಡಿಕೆ ಮರಗಳು ಮುರಿದು ಬಿದ್ದಿವೆ. ಕಳೆದ ವರ್ಷ ಮಾರ್ಚ್ 12ರಂದು ಮೊದಲ ಮಳೆಯಾಗಿದ್ದರೆ, ಈ ಬಾರಿ ಫೆ.21ರಂದು ಮೊದಲ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.