ಯುವ ಪೀಳಿಗೆ ಸಂಘಟಿಸಲು ಸಲಹೆ

7
ಕರ್ನಾಟಕ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್

ಯುವ ಪೀಳಿಗೆ ಸಂಘಟಿಸಲು ಸಲಹೆ

Published:
Updated:
Deccan Herald

ಮೂಲ್ಕಿ: ‘ತುಳುನಾಡಿನ ಆಚರಣೆಯ ಮೂಲಕ ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತರಲು ಸಂಘಟನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಿದೆ. ಹಿರಿಯರ ಮಾರ್ಗರ್ಶನದಲ್ಲಿ ನಂಬಿಕೆಯನ್ನು ಉಳಿಸುವ ಕೆಲಸ ನಾವೆಲ್ಲರು ಒಂದಾಗಿ ಮಾಡುವಂತಹ ಅನಿವಾರ್ಯತೆ ಇದೆ’ ಎಂದು ಕರ್ನಾಟಕ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕ ಮತ್ತು ಬಿಲ್ಲವ ಸಂಘದ ಜಂಟಿ ಆಶ್ರಯದಲ್ಲಿ ಭಾನುವಾರ ನಡೆದ ಆಟಿದ ಐಸ್ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಗಳೂರು ಯುವವಾಹಿನಿಯ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಯಶವಂತ ಪೂಜಾರಿ ಅವರು ಕಾರ್ಯಕ್ರಮವನ್ನು ಭತ್ತದ ಕಣಜದಲ್ಲಿನ ತೆಂಗಿನ ಹೂವನ್ನು ಅರಳಿಸುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿ, ‘ಬಿಲ್ಲವ ಸಂಘಟನೆಗಳು ಬೆಳೆದಂತೆ ನಾಯಕತ್ವ ಗುಣ ಬೆಳೆಯುತ್ತಾ ಸಮಾಜದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಯುವಕರನ್ನು ಸನ್ಮಾರ್ಗದಲ್ಲಿ ಸಾಗಲು ಯುವವಾಹಿನಿ ಉತ್ತಮ ವೇದಿಕೆಯಾಗಿದೆ’ ಎಂದರು.

ಪಶು ಚಿಕಿತ್ಸಕರಾಗಿರುವ ಫೆಲಿಕ್ಸ್ ಡೇಸರನ್ನು ಸನ್ಮಾನಿಸಲಾಯಿತು. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,‘ಪ್ರತೀ ಮನೆಯಲ್ಲಿನ ಯುವಕರು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಗೋಪಾಲ ಅಂಚನ್ ಮಾತನಾಡಿ, ‘ ಪ್ರಕೃತಿಯೊಂದಿಗೆ ಹಸಿವು, ಹೆದರಿಕೆ, ಚಿಕಿತ್ಸಕ ದೃಷ್ಟಿಯಿಂದ ಆಷಾಢ ಮಾಸವನ್ನು ಹಿರಿಯರು ಅನುಭವಿಸಿದ್ದಾರೆ. ವೈದ್ಯಕೀಯ ಪದ್ಧತಿಗಳನ್ನು ಅಂದಿನ ತಿನಸಿನಲ್ಲಿ ಅನುಸರಿಸುತ್ತಿದ್ದರು. ಇದರಲ್ಲಿ ನಂಬಿಕೆಯೊಂದಿಗೆ ಮೌಢ್ಯವನ್ನು ದೂರಮಾಡುವ ಗುಣ ಇದ್ದುದನ್ನು ನಾವು ಕಾಣುವಂತಾಗಬೇಕು’ ಎಂದು ಹೇಳಿದರು.

ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಉಪಾಧ್ಯಕ್ಷ ಜಯ ಜೆ. ಸುವರ್ಣ, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಯುವವಾಹಿನಿ ಘಟಕದ ಅಧ್ಯಕ್ಷ ಹೇಮನಾಥ್ ಬಿ. ಕರ್ಕೇರ, ನಿಕಟಪೂರ್ವ ಅಧ್ಯಕ್ಷ ಶರತ್ ಸಾಲ್ಯಾನ್, ಜನಪದ ಸಂಶೋಧಕ ಡಾ. ಗಣೇಶ್ ಅಮಿನ್ ಸಂಕಮಾರ್, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್, ಕೋಶಾಧಿಕಾರಿ ರಮೇಶ್ ಬಂಗೇರ, ಹಿಮಕರ್ ಸುವರ್ಣ, ಬ್ರಿಜೇಶ್ ಕುಮಾರ್ ಇದ್ದರು.

ವಿಶೇಷ ಖಾದ್ಯ: ಎಡ್ಡೆ ಮುಂಚಿದ ಕಷಾಯ, ಗುಜ್ಜೆದ ಹಪ್ಪಳ, ಅಂಬಡೆದ ಉಪ್ಪಡ್, ತೆಕ್ಕರೆದ ತಲ್ಲಿ, ತಿಮರೆ ಚಟ್ನಿ, ಕುಡತ್ತ ಚಟ್ನಿ, ರಚ್ಚ ಗೂಂಜಿ ಚಟ್ನಿ, ಕುಕ್ಕು ಪೆಜಕಾಯಿ ಚಟ್ನಿ, ಉಪ್ಪ ಪಚ್ಚಿರ್, ಕಣಿಲೆ ಪದೆಂಗಿ ಗಸಿ, ತೊಪ್ಪು ತೊಜಂಕ್, ತೇವು ತೇಟ್ಲ, ಬಂಬೆ ಕುಡುಗಸಿ, ತೇವುದ ಇರೆತ ಅಡ್ಡೆ, ಸುಗ್ಗದ ಅರಿತ್ತ ಉರ್ಪೆಲ್ ನುಪ್ಪು, ನೆಸಲ್ದ ಕುಡತ್ತ ಸಾರ್, ಸಾರ್ನಡ್ಡೆ, ಪುಸ ಬಚ್ಚಿರೆ, ಲತ್ತ್ ಪೂಲ್ ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !