ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಸಂಬಂಧಗಳಿಗೆ ರಕ್ತದಾನ ಪ್ರೇರಕ: ಡಾ.ರಾಜಾರಾಮ್

Last Updated 31 ಮೇ 2021, 11:20 IST
ಅಕ್ಷರ ಗಾತ್ರ

ವಿಟ್ಲ: ‘ರಕ್ತದಾನ ಎನ್ನುವುದು ಒಂದು ಶ್ರೇಷ್ಠದಾನ. ಜೀವವೊಂದಕ್ಕೆ ಚೈತನ್ಯದ ಮರುಪೂರಣದ ಸಾಮರ್ಥ್ಯ ಹೊಂದಿರುವ ರಕ್ತವು ಪರಸ್ಪರವಾದ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ರಕ್ತದಾನದ ಮೂಲಕ ಸಾಧಿಸಬಹುದು’ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಹೇಳಿದರು.

ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವವಾಹಿನಿ ಮಾಣಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್, ಕಡೇಶಿವಾಲಯ ಹಾಗೂ ಲಯನ್ಸ್ ಕ್ಲಬ್ ಮಾಣಿ ಇವುಗಳ ಸಹಯೋಗದೊಂದಿಗೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆಯ ರಕ್ತನಿಧಿಯ ಸಹಕಾರದಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ವಹಿಸಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿರುವೆರ್ ಕಡೇಶಿವಾಲಯದ ಅಧ್ಯಕ್ಷ ರೂಪೇಶ್ ಪತ್ತೊಡಂಗೆ, ಮಾಣಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಗಂಗಾಧರ ರೈ, ಕಾರ್ಯದರ್ಶಿ ಉಮೇಶ್, ಶಿಬಿರದ ನಿರ್ದೇಶಕ ಡಾ.ಮನೋಹರ್ ರೈ, ರೆಡ್‌ಕ್ರಾಸ್ ಸೊಸೈಟಿಯ ಪ್ರಾದೇಶಿಕ ಸಲಹೆಗಾರರಾದ ನಾಗೇಶ್ ಕಾಮತ್, ಡಾ.ಶಶಾಂಕ್, ಡಾ.ವರ್ಷಾ ಹಾಗೂ ಯುವವಾಹಿನಿ ಮಾಣಿ ಘಟಕದ ಆರೋಗ್ಯ ನಿರ್ದೇಶಕ ಪ್ರಕಾಶ್ ಪೇರಮೊಗರು ಉಪಸ್ಥಿತರಿದ್ದರು.

ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಪ್ರಶಾಂತ್ ಅನಂತಾಡಿ ಸ್ವಾಗತಿಸಿದರು. ಸದಸ್ಯೆ ಜಯಶ್ರೀ ಬರಿಮಾರು ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ 60 ಮಂದಿ ರಕ್ತದಾನ ಮಾಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಬಾಕಿಲ, ಯುವವಾಹಿನಿ ಮಾಣಿ ಘಟಕದ ನಿಕಟಪೂರ್ವ ಅಧ್ಯಕ್ಷ ರಮೇಶ್ ಮುಜಲ, ಸಲಹೆಗಾರರಾದ ಜಯಂತ್ ಪೂಜಾರಿ ಬರಿಮಾರು, ಬಾಲಕೃಷ್ಣ ದೇಲಬೆಟ್ಟು, ಉಪಾಧ್ಯಕ್ಷ ಸುಜಿತ್ ಅಂಚನ್ ಮಾಣಿ, ಕೋಶಾಧಿಕಾರಿ ರಾಜೇಶ್ ಕೋಟ್ಯಾನ್, ಬಿಲ್ಲವ ಸಂಘದ ಉಪಾಧ್ಯಕ್ಷ ಸೋಮಪ್ಪ ಪೂಜಾರಿ ಮಾದೇಲು, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜನಾರ್ದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT