ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ನಾಯಿಗಳಿಗೆ ಕೆನೈನ್ ಡಿಸ್ಟಂಪರ್ ಸೋಂಕು: ಲಸಿಕೆಯೇ ಪರಿಹಾರ

Published 22 ಮಾರ್ಚ್ 2024, 5:02 IST
Last Updated 22 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸುತ್ತಮುತ್ತ ನಾಯಿಗಳಿಗೆ ಕೆನೈನ್ ಡಿಸ್ಟಂಪರ್‌ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಾಕುನಾಯಿ ಮಾಲೀಕರು ಆತಂಕಪಟ್ಟುಕೊಳ್ಳುವಂತಾಗಿದೆ.

‘ಪ್ರತಿವರ್ಷ ಬೇಸಿಗೆಯಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ರೋಗ ತಗುಲಿದ ಶೇ 20ರಷ್ಟು ನಾಯಿಗಳು ಮೃತಪಡುತ್ತವೆ. ಕೆಲವು ಬದುಕಿ ಉಳಿದರೂ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತವೆ. ಈ ರೋಗ ತಡೆಗಟ್ಟಲು ಲಸಿಕೆಯೊಂದೇ ಮಾರ್ಗವಾಗಿದೆ’ ಎನ್ನುತ್ತಾರೆ ಪಶುವೈದ್ಯರು.

‘ನಾಯಿ ಮತ್ತು ನಾಯಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಮಾತ್ರ ಈ ರೋಗ ಹರಡುತ್ತದೆ. ನಾಯಿಗಳ ಮೂಗಿನಿಂದ ಹರಿಯುವ ಹನಿಯಿಂದ, ಕೆಮ್ಮಿನಿಂದ ಉಳಿದ ನಾಯಿಗಳಿಗೆ ಹರಡಬಹುದು. ಪ್ರಾಣಿಪ್ರಿಯರು ನಾಯಿ ಮರಿಗಳಿಗೆ ಆರು ವಾರ ಆದ ತಕ್ಷಣ ಲಸಿಕೆ ಹಾಕಿಸಬೇಕು. ಕನಿಷ್ಠ ಎರಡು ಲಸಿಕೆಯನ್ನಾದರೂ ಹಾಕಿಸಬೇಕು. ಆದರೆ, ಲಸಿಕೆಗಳು ಉಚಿತವಾಗಿ ಲಭ್ಯವಿಲ್ಲ’ ಎಂದು ಪಶುಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ್‌ನ ಉಪನಿರ್ದೇಶಕ ತಮ್ಮಯ್ಯ ಎ.ಬಿ. ತಿಳಿಸಿದರು.

‘ಚರ್ಮಕ್ಕೆ, ಶ್ವಾಸಕೋಶಕ್ಕೆ, ಕರುಳು ಮತ್ತು ಮಿದುಳು ಹೀಗೆ ನಾಲ್ಕು ವಿಧಗಳಲ್ಲಿ ರೋಗ ತಗುಲಬಹುದು. ಮಿದುಳಿಗೆ ತಗುಲಿದರೆ ನರ ದೌರ್ಬಲ್ಯ ಆಗುತ್ತದೆ. ಚರ್ಮಕ್ಕೆ ಬಂದರೆ ಗುಳ್ಳೆಗಳು ಆಗುತ್ತವೆ. ಈ ರೋಗ ಸಾಮಾನ್ಯವಾಗಿ ಎಲ್ಲ ವೇಳೆ ಇರುತ್ತದೆ. ಆದರೆ, ತಿಂಗಳ ಈಚೆಗೆ ಮಂಗಳೂರು ಸುತ್ತಮುತ್ತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ ನಮ್ಮ ಆಸ್ಪತ್ರೆಗೆ 2–3 ಪ್ರಕರಣಗಳು ಬರುತ್ತಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT