ರಬ್ಬರ್ ತೋಟದ ಶಿಕ್ಷಣ ವಂಚಿತ ಮಕ್ಕಳು

7
ಕಡಮಕಲ್ಲು, ಕೂಜುಮಲೆ; 600ಕ್ಕೂ ಮಿಕ್ಕಿ ಕೂಲಿ ಕಾರ್ಮಿಕರು

ರಬ್ಬರ್ ತೋಟದ ಶಿಕ್ಷಣ ವಂಚಿತ ಮಕ್ಕಳು

Published:
Updated:
Deccan Herald

ಸುಬ್ರಹ್ಮಣ್ಯ: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕಡಮಕಲ್ಲು ರಬ್ಬರ್ ತೋಟಗಳಲ್ಲಿ ಹೊರ ರಾಜ್ಯದ ನೂರಾರು ಕಾರ್ಮಿಕರು ದುಡ್ಡಿಯುತ್ತಿದ್ಗದು, ಇವರ ಮಕ್ಕಳು ರಬ್ಬರ್ ಕೂಪಿನ ನಡುವೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಕಡಮಕಲ್ಲು ಮತ್ತು ಕೂಜುಮಲೆ ಇವೆರಡು ರಬ್ಬರ್ ಎಸ್ಟೇಟ್‌ ಕೇರಳ ಕಂಪನಿಗೆ ಸೇರಿದೆ. ಇವರಿಗೆ ಸೇರಿದ ರಬ್ಬರ್ ತೋಟಗಳಲ್ಲಿ ಅಸ್ಸಾಂ, ಛತ್ತೀಸ್‍ಗಢ, ಒಡಿಶಾ, ಜಾರ್ಖಂಡ್ ರಾಜ್ಯಗಳಿಗೆ ಸೇರಿದ 600ಕ್ಕೂ ಮಿಕ್ಕಿದ ಕೂಲಿ ಕಾರ್ಮಿಕರು ಇದ್ದಾರೆ. ಇವರೆಲ್ಲ ಬಾಂಗ್ಲಾ ದೇಶದವರು ಎನ್ನುವ ಶಂಕೆ ವ್ಯಕ್ತವಾಗಿದೆ.

ಹೊರರಾಜ್ಯದ ಕಾರ್ಮಿಕರ ಪೈಕಿ 200 ರಷ್ಟು ಮಂದಿ ಮಕ್ಕಳೇ ಆಗಿದ್ದಾರೆ. ಈ ಮಕ್ಕಳು ಕಡಮಕಲ್ಲು ಸರ್ಕಾರಿ ಶಾಲೆಗೆ ತೆರಳಬೇಕು. ಮಕ್ಕಳು ಶಾಲೆಗೆ ತೆರಳುತ್ತಾರೆ ಅನ್ನುವುದಕ್ಕೆ ಯಾವ ಖಾತ್ರಿಯೂ ಇಲ್ಲ. ಮಕ್ಕಳು ಶಾಲೆಗೆ ಹೋಗದೆ ಮನೆಗಳ ಒಳಗೆ, ರಬ್ಬರ್ ತೋಟಗಳಲ್ಲಿ ಉಳಿದುಕೊಂಡಿರುವ ಸಾಧ್ಯತೆಗಳಿದ್ದು, ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆಯಬೇಕಿದ್ದ ಮಕ್ಕಳು ಇಲ್ಲಿ ತೋಟಗಳ ನಡುವೆ ಉಳಿದುಕೊಂಡಿದ್ದಾರೆ.

ವಲಸೆ ಬಂದ ಈ ಕಾರ್ಮಿಕರ ಕುರಿತು ಸ್ಪಷ್ಟ ಯಾವುದೇ ಮಾಹಿತಿ ತೋಟದ ಮಾಲಿಕರು, ಪೊಲೀಸರಲ್ಲೂ ಇಲ್ಲ. ಈ ಭಾಗ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿದ್ದು ನಕ್ಸಲರ ಚಟುವಟಿಕೆಯ ವ್ಯಾಪ್ತಿಯಲ್ಲಿದೆ. ಈ ಸ್ಥಳ ಅಡಗುತಾಣವಾಗಿದ್ದು ಭಯೋತ್ಪಾದನೆ ಚಟುವಟಿಕೆಗಳು ಇಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಇಂತಹ ಅಕ್ರಮ ವಲಸಿಗರ ಕುರಿತು ಪೊಲೀಸ್ ಇಲಾಖೆ ನಿಗಾವಹಿಸದೆ ಇರುವುದು ಕಂಡುಬರುತ್ತದೆ.

ಬಾಂಗ್ಲಾ ಅಕ್ರಮ ವಲಸಿಗರೇ?

ಕಾರ್ಮಿರನ್ನು ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳಿವೆ. ಈ ಕಾರ್ಮಿಕರಲ್ಲಿ ಸರಿಯಾದ ದಾಖಲೆಪತ್ರಗಳು ಇಲ್ಲ. ಇವರು ಬಾಂಗ್ಲಾ ಅಕ್ರಮ ವಲಸಿಗರು ಎನ್ನಲಾಗುತ್ತಿದೆ. ಮುಸ್ಲಿಂ, ಹಿಂದೂ ಸಮುದಾಯಕ್ಕೆ ಸೇರಿದ ಈ ಕುಟುಂಬಗಳ ಪೈಕಿ ವಯಸ್ಸಿಗೆ ಮುಂಚಿತ  ಕಾನೂನು–ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿಕೊಂಡು ಮಕ್ಕಳನ್ನು ಪಡದುಕೊಂಡಿದ್ದಾರೆ.  1902ರಲ್ಲಿ ಅರಣ್ಯ ಇಲಾಖೆಯಿಂದ ಲೀಸಿಗೆ ಪಡೆದು ರಬ್ಬರ್ ತೋಟ ನಿರ್ಮಿಸಿದ್ದು, ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ತೋಟವಿದೆ. ಲೀಸ್ ಅವಧಿ ಈ ಹಿಂದೆಯೇ ಮುಗಿದಿದ್ದು 99 ವರ್ಷದ ನಿಗದಿತ ಅವಧಿಯನ್ನು 99ರ ಬದಲು 999 ವರ್ಷ ಎಂದು ತೋರ್ಪಡಿಸಿ ಹಣದ ಪ್ರಭಾವ, ಒತ್ತುವರಿ ಇತ್ಯಾದಿಗಳಿಂದ  ಭೂಮಿ ಉಳಿಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಅರಣ್ಯ ಒತ್ತುವರಿ ಕೂಡ ನಡೆದಿರುವುದು ಇಲ್ಲಿ ಕಂಡು ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !