ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಭದ್ರತೆಗೆ ಸಹಕಾರಿ ತತ್ವ ಬುನಾದಿ: ವಿಖ್ಯಾತಾನಂದ ಸ್ವಾಮೀಜಿ

ಬಿ.ಸಿ.ರೋಡು: ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದ 14ನೇ ಶಾಖೆ ಉದ್ಘಾಟನೆ
Published 1 ಏಪ್ರಿಲ್ 2024, 5:36 IST
Last Updated 1 ಏಪ್ರಿಲ್ 2024, 5:36 IST
ಅಕ್ಷರ ಗಾತ್ರ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರುಗಳ ಆಶಯದಂತೆ ಶಿಕ್ಷಣದ ಜತೆಗೆ ಸಂಘಟನೆ ಮತ್ತು ಆರ್ಥಿಕವಾಗಿ ಬಲಾಢ್ಯರಾಗಲು ಸಹಕಾರ ತತ್ವ ಬುನಾದಿಯಾಗಿದೆ ಎಂದು ಸೋಲೂರು ಮಠದ ಆರ್ಯ ಈಡಿಗ ಸಂಸ್ಥಾನದ ತೀರ್ಥಾಧಿಪತಿ, ಹೊಸ್ಮಾರು ಬಲ್ಯೊಟ್ಟು ಶ್ರೀಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಭಾನುವಾರ ಆರಂಭಗೊಂಡ ಸಜಿಪಮುನ್ನೂರು ಸೇವಾ ಸಹಕಾರ ಸಂಘದ 14ನೇ ಶಾಖೆಯನ್ನು ಉದ್ಘಾಟಿಸಿ ಆವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ, ‘ಬಡವರಿಗೆ ಸಾಲ ಸೌಲಭ್ಯ ಸರಳವಾಗಿ ಸಿಗಬೇಕು ಎಂಬ ಆಶಯದೊಂದಿಗೆ ಆರಂಭಗೊಂಡ ಸಂಘವು ಸಂಪೂರ್ಣ ಮಹಿಳಾ ಸಿಬ್ಬಂದಿಯ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಶೀಘ್ರವೇ ವೇಣೂರು ಶಾಖೆ ಆರಂಭಿಸಲಾಗುವುದು ಎಂದರು.

ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸೇಫ್ ಲಾಕರ್ ಉದ್ಘಾಟಿಸಿದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ ಕಂಪ್ಯೂಟರ್ ವ್ಯವಸ್ಥೆ ಉದ್ಘಾಟಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಪೈಪೋಟಿ ನೀಡಿ ರಾಷ್ಟ್ರೀಕೃತ ಬ್ಯಾಂಕುಗಳ ದಿಕ್ಕು ಬದಲಿಸಿವೆ ಎಂದರು.

ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಗುರುಕೃಪಾ, ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ ಕಾನ್ಸಾಲೆ, ಕೆ.ಸುಜಾತಾ ಎಂ., ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ಭಾಗವಹಿಸಿದ್ದರು.

ಸಿಇಒ ಮಮತಾ ಜಿ.ಸ್ವಾಗತಿಸಿ, ಸುಚಿತ್ರಾ ಪ್ರಾರ್ಥಿಸಿದರು. ವಿಜಯಾ ಕೆ.ವಂದಿಸಿದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಠೇವಣಿ ಪತ್ರ, ಉಳಿತಾಯ ಖಾತೆ ಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT