ಆಧ್ಯಾತ್ಮಿಕ ಚಿಂತನೆಯಿಂದ ಸಾಧನೆ

7
ಪಾಲಕರ ದಿನಾಚರಣೆಯಲ್ಲಿ ಬಲಿ ಪೂಜೆ, ಧಾರ್ಮಿಕ ವಿಧಿ, ವಿಧಾನ

ಆಧ್ಯಾತ್ಮಿಕ ಚಿಂತನೆಯಿಂದ ಸಾಧನೆ

Published:
Updated:
Deccan Herald

ಪುತ್ತೂರು: ‘ಮಾನವನು ತನ್ನ ಜೀವನದ ವಿವಿಧ ಆಯಾಮಗಳಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳುವ ಮನೋಗುಣವನ್ನು ಹೊಂದಿದಾಗ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ’ ಎಂದು ಮಂಗಳೂರು ಧರ್ಮಪ್ರಾಂತ್ಯದ ಜುಡಿಶಿಯಲ್ ವಿಕಾರ್ ವಾಲ್ಟರ್ ಡಿಮೆಲ್ಲೊ ಹೇಳಿದರು.

ಪುತ್ತೂರಿನ ಸೇಂಟ್‌ ಫಿಲೋಮಿನಾ ಕಾಲೇಜಿನ ದಿವ್ಯ ಚೇತನ ಸಂಘದ ಆಶ್ರಯದಲ್ಲಿ ಶನಿವಾರ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆದ ಪಾಲಕರ ದಿನಾಚರಣೆಯಲ್ಲಿ ಬಲಿ ಪೂಜೆ ಮತ್ತು ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಮಾನವನ ಜೀವನ ಶೈಲಿಯೇ ಬದಲಾಗಿದೆ. ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ತಾಂತ್ರಿಕತೆಯು ಆವರಿಸಿಕೊಂಡಿದೆ. ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಜ್ಞಾನ, ಕೌಶಲ ಮತ್ತು ಸಂಪತ್ತು ಗಳಿಕೆಯಲ್ಲಿಯೇ ತಲ್ಲೀನರಾಗಿರುವುದರಿಂದ ಆಧ್ಯಾತ್ಮಿಕ ಚಿಂತನೆಯು ಕಡಿಮೆಯಾದಂತೆ ಭಾಸವಾಗುತ್ತದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ಪ್ರಾಮಾಣಿಕತೆ, ಶಾಂತಿ ಸೌಹಾರ್ದ ಮತ್ತು ಮಾನವೀಯ ಸಂಬಂಧಗಳು ಉತ್ತಮವಾಗಿ ಬೆಳೆಯಬೇಕಾಗಿದೆ ಎಂದು ಆಶಿಸಿದರು. ‌

ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ‘ದೇವರಲ್ಲಿ ನಂಬಿಕೆ ಮತ್ತು ಕೆಲಸದಲ್ಲಿ ಸಮರ್ಪಣಾ ಮನೋಭಾವ ಹೊಂದಿದರೆ ಶೈಕ್ಷಣಿಕ ಪ್ರಗತಿಯ ಗುರಿಯನ್ನು ತಲುಪುವುದು ಸುಲಭವಾಗುತ್ತದೆ‘ ಎಂದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ, ಮರೀಲ್ ಚರ್ಚ್‌ನ ಧರ್ಮ ಗುರು ವಲೇರಿಯನ್ ಫ್ರಾಂಕ್, ಮುಕ್ರುಂಪಾಡಿಯ ಸಾಂತೋಮ್ ಗುರು ಮಂದಿರದ ರೆಕ್ಟರ್ ಸನ್ನಿ ಮ್ಯಾಥ್ಯು, ಪುತ್ತೂರು ಮಾದೆ ದೇವುಸ್ ಚಚರ್್ನ ಸಹಾಯಕ ಧರ್ಮಗುರು ಪ್ರವೀಣ್ ಡಿಸೋಜ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಜಾರ್ಜ್‌ ಡಿಸೋಜ, ಬನ್ನೂರು ಚರ್ಚ್‌ನ ಧರ್ಮಗುರು ಪ್ರಶಾಂತ್ ಫರ್ನಾಂಡಿಸ್, ಪಂಜ ಚರ್ಚ್‌ನ ಧರ್ಮಗುರು ಅನಿಲ್ ಲೋಬೊ, ಬೆಳ್ಳಾರೆ ಚರ್ಚ್‌ನ ಧರ್ಮಗುರು ಪೀಟರ್ ಗೊನ್ಸಾಲ್ವಿಸ್, ಸುಳ್ಯ ಚರ್ಚ್‌ನ ಧರ್ಮಗುರು ವಿನ್ಸೆಂಟ್ ಡಿಸೋಜ, ಪುತ್ತೂರಿನ ಪೌಲ್ ಸೆಬಾಸ್ಟಿಯನ್, ಸೇಂಟ್‌ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಇದ್ದರು.

ದಿವ್ಯ ಚೇತನ ಸಂಘದ ಅಧ್ಯಕ್ಷ ರಂಜಿತ್ ಎ. ಸ್ವಾಗತಿಸಿ, ಕಾರ್ಯದರ್ಶಿಮೇರಿ ಮೆಲನಿಯ ವಂದಿಸಿದರು. ಕಾಲೇಜಿನ ದಿವ್ಯ ಚೇತನ ಸಂಘದ ನಿರ್ದೇಶಕ ರಿತೇಶ್ ರೋಡ್ರಿಗಸ್  ಸಂಯೋಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !