ಚಳ್ಳಕೆರೆ: ಜನ ಸಂಖ್ಯೆಗನುಗುಣವಾಗಿ ತಾಲ್ಲೂಕಿನ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ರೈತ ಸಂಘ, ದಲಿತ ಸಂಘರ್ಷ ಸಮಿತಿ ಮುಂತಾದ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ‘ತಳಕು ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವುದಲ್ಲದೆ. ಜನಸಂಖ್ಯೆಗನುಗುಣವಾಗಿ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ತೆರೆಯಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ‘ತಳಕು ಹೋಬಳಿ ವ್ಯಾಪ್ತಿಯಲ್ಲಿ ಎಮ್ಮೆ, ಕುರಿ, ಹಸು, ಬೈಕ್, ಕೃಷಿ ಪಂಪ್ಸೆಟ್, ಮೋಟಾರ್, ವಯರ್ ಮುಂತಾದ ವಸ್ತುಗಳು ಕಳುವಾಗುತ್ತಿವೆ. ಸರಣಿ ಕಳ್ಳತನದ ಜತೆಗೆ ಮನೆಗೆ ನುಗ್ಗಿ ಕಳವು ಮಾಡುವ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಇದರಿಂದ ವಿವಿಧ ಗ್ರಾಮಗಳ ಜನರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ರಾತ್ರಿ ವೇಳೆ ಕಳ್ಳರ ಚಲನವಲನ ಸುಲಭವಾಗಿ ಪತ್ತೆ ಹಚ್ಚಲು ಪ್ರತಿ ಗ್ರಾಮದ ಪ್ರಮುಖ ಬೀದಿಯಲ್ಲಿ ಅತ್ಯಾಧುನಿಕ ಗುಣಮಟ್ಟದ 3ರಿಂದ 4 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ತಳಕು ಗ್ರಾಮದಲ್ಲಿ ಸಿಪಿಐ ಕಚೇರಿ ತೆರೆದು ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಕಳ್ಳರನ್ನು ಹಿಡಿಯಲು ಅನುಕೂಲವಾಗುವಂತಹ ಹೈಟೆಕ್ ವಾಹನ, ತಂತ್ರಜ್ಞಾನ ಆಧಾರಿತ ಬಂದೂಕು, ಪಿಸ್ತೂಲ್ ಮತ್ತು ಸಮವಸ್ತ್ರ ಮುಂತಾದ ಸೌಲಭ್ಯ ಒದಗಿಸಬೇಕು’ ಎಂದು ಗೃಹ ಸಚಿವರನ್ನು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹಿರೇಹಳ್ಳಿ ತಿಪ್ಪೇಸ್ವಾಮಿ, ಎದ್ದುಲು ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಚಂದ್ರಶೇಖರನಾಯ್ಕ, ಓಬ್ಯಾನಾಯ್ಕ, ಮೀಟ್ಯಾನಾಯ್ಕ, ಮೊಳಕಾಲ್ಮುರು ತಾಲ್ಲೂಕು ಘಟಕದ ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಮನ್ನೆಕೋಟೆ ತಿಪ್ಪೇರುದ್ರಪ್ಪ ಮಾತನಾಡಿದರು.

ರೈತ ಮುಖಂಡ ವಾಗೀಶ್, ನಾಗರಾಜ, ಕೆ.ಟಿ.ಕಪಿಲೆ ತಿಪ್ಪೇಸ್ವಾಮಿ, ಟಿ.ಗಂಗಾಧರ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಪಾಲನಾಯಕನಕೋಟೆ ಪೂಜಾರಿ ತಿಪ್ಪೇಸ್ವಾಮಿ, ದಲಿತ ಸಂಘರ್ಷ ಸಮಿತಿ ಮುಖಂಡ ಹಿರೇಹಳ್ಳಿ ರಾಜಣ್ಣ, ಕಾಮಯ್ಯ, ರುದ್ರಮುನಿ, ಗಿಡ್ಡಾರೆಡ್ಡಿ, ನಾಗೇಶ್, ಪ್ರಾಶಾಂತರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.