ಮಂಗಳೂರು: ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ತುಳು ಭಾಷೆಯಲ್ಲಿ ‘ಸಿರಿ ದೇವಿ ಮೈಮೆ’ ಎಂಬ ಹೆಸರಿನಲ್ಲಿ ಸೆಪ್ಟೆಂಬರ್ 30ರಂದು ಮಧ್ಯಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು.
ಕನ್ಯಾನ ಸದಾಶಿವ ಶೆಟ್ಟಿ ಅವರ ತಾಯಿ ಲಲಿತಾ ಶೆಟ್ಟಿ ಅವರು ಸದಾಶಿವ ಶೆಟ್ಟಿ ಅವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ತುಳುವೆರೆ ಆಯನೊ ಕೂಟ ಕುಡ್ಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷೆ ಶಮಿನಾ ಆಳ್ವ, ಕಾರ್ಯದರ್ಶಿ ರಾಜೇಶ್ ಹೆಗ್ಡೆ ಪೊಳಲಿ, ಗೋಪಾಡ್ಕರ್, ಆಶಾ ಅತ್ತಾವರ, ಗೀತಾ ಹೆಗ್ಡೆ, ಭಾರತಿ ಶೆಟ್ಟಿ ಮೂಲ್ಕಿ, ಭೂಷಣ್ ಕುಲಾಲ್ ಮತ್ತಿತರರು ಇದ್ದರು. ರಾಜೇಶ್ ಆಳ್ವ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ‘ತುಳುವೆರೆ ಕರ್ಣೆ’ ಎಂಬ ಬಿರುದು ಪ್ರದಾನ ಮಾಡಲಾಗುವುದು. ‘ಸಿರಿ ದೇವಿ ಮೈಮೆ’ ಪುಸ್ತಕ ಬಿಡುಗಡೆ ಮತ್ತು ವಾಯ್ಸ್ ಆಫ್ ಆರಾಧನಾ ಮಕ್ಕಳಿಂದ ‘ಜೋಕ್ಲೆ ಮಿನದನ’ ಕಾರ್ಯಕ್ರಮ ನಡೆಯಲಿದೆ. ಸರಪಾಡಿ ಅಶೋಕ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.