ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಹೊಟ್ಟೆಯಲ್ಲಿ ಎನ್.95 ಮಾಸ್ಕ್ !

Last Updated 28 ಫೆಬ್ರುವರಿ 2022, 16:44 IST
ಅಕ್ಷರ ಗಾತ್ರ

ಕಾಸರಗೋಡು: ಸಾಕುನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಸೇರಿಕೊಂಡಿರುವುದು ಸ್ಕ್ಯಾನಿಂಗ್ ಮೂಲಕ ದೃಢಪಟ್ಟು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.

ನೀಲೇಶ್ವರದ ರಾಜನ್ ಎಂಬುವರು ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಪಶುವೈದ್ಯರ ಸಲಹೆಯಂತೆ ಕಣ್ಣೂರು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಲಾಯಿತು.

ವರದಿ ಪರಿಶೀಲಿಸಿದ ವೈದ್ಯರು, ಹೊಟ್ಟೆಯೊಳಗೆ ಸೇರಿದ್ದ ಮಾಸ್ಕ್‌ ಅನ್ನು ಗಮನಿಸಿದರು. ಶಸ್ತ್ರಚಿಕಿತ್ಸೆ ಮೂಲಕ ಮಾಸ್ಕ್ ಅನ್ನು ಹೊರತೆಗೆಯಲಾಯಿತು. ‘ನಾಯಿ ಇನ್ನೂ ಚೇತರಿಸಿಕೊಂಡಿಲ್ಲ. ಪ್ರತಿದಿನ ಬೆಳಗ್ಗೆ ಪಯ್ಯನ್ನೂರಿನ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ’ ಎಂದು ರಾಜನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT