ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯ ಡಾ.ರಾಘವೇಂದ್ರ ಉರಾಳ

Last Updated 7 ಆಗಸ್ಟ್ 2018, 19:09 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಕೋಟದ ಪ್ರಸಿದ್ಧ ಹಿರಿಯ ಪಶುವೈದ್ಯ ಡಾ.ರಾಘವೇಂದ್ರ ಉರಾಳ (79) ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಒಬ್ಬರು ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೋಟ, ಪುತ್ತೂರು, ಕುಂದಾಪುರ, ಮಂಗಳೂರು, ಮಣಿಪಾಲ ವಿವಿಧ ಕಡೆ ಸರ್ಕಾರಿ ಪಶುವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಕೋಟದ ಪ್ರತಿಷ್ಠಿತ ‘ಕಾರಂತ ಹುಟ್ಟೂರ ಪ್ರಶಸ್ತಿ’ ಹುಟ್ಟು ಹಾಕಲು ಕಾರಣಕರ್ತರಲ್ಲೊಬ್ಬರಾಗಿ, ಕಾರಂತ ಹುಟ್ಟೂರ ಪ್ರತಿಷ್ಠಾನದ ಸದಸ್ಯರಾಗಿ, ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೋಟತಟ್ಟು ಗ್ರಾಮ ಪಂಚಾಯಿತಿ ಬಯಲು ಶೌಚಾಲಯಮುಕ್ತ ಗ್ರಾಮದ ಸಾಕಾರಕ್ಕೆ ಮುನ್ನುಡಿ ಬರೆದ ಮಹನೀಯರಾಗಿದ್ದರು.

ನಿಧನಕ್ಕೆ ಕೋಟ ಸಂತಾಪ: ಡಾ.ಉರಾಳ ನಿಧನಕ್ಕೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಹಿರಿಯ ಪಶು ವೈದ್ಯರಾಗಿ ಸೇವೆ ಸಲ್ಲಿಸಿದ ಡಾ.ಉರಾಳ ಅವರು ಡಾ.ಶಿವರಾಮ ಕಾರಂತರ ಒಡನಾಡಿ. ಕಾರಂತರ ಆದರ್ಶಗಳು ಉರಾಳರ ಬದುಕಿನಲ್ಲಿ ನೆಲೆಸಿತ್ತು. ಶಿವರಾಮ ಕಾರಂತ ಥೀಂ ಪಾರ್ಕ್ ರಚನೆ ಮತ್ತು ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿಯಾಗಿದ್ದ ಡಾ.ಉರಾಳರು ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣಗೊಳಿಸುವಲ್ಲಿ ನಮಗೆಲ್ಲ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT