ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದುಬೈ ಕನ್ನಡ ಪಾಠಶಾಲೆಗೆ’ ದಶಮಾನೋತ್ಸವ ಸಂಭ್ರಮ

Published 16 ಮೇ 2024, 6:22 IST
Last Updated 16 ಮೇ 2024, 6:22 IST
ಅಕ್ಷರ ಗಾತ್ರ

ದುಬೈ: ಕನ್ನಡ ಮಿತ್ರರು ಯುಎಇ ಸಂಘಟನೆ ನಡೆಸುವ, ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕನ್ನಡ ಪಾಠಶಾಲೆ ದುಬೈ’ನ 10ನೇ ವರ್ಷದ ಶೈಕ್ಷಣಿಕ ಸಮಾರೋಪ ಮತ್ತು ದಶಮಾನೋತ್ಸವ ಕಾರ್ಯಕ್ರಮ ಈಚೆಗೆ ದುಬೈನ ಇಂಡಿಯನ್ ಅಕಾಡೆಮಿಯಲ್ಲಿ ನಡೆಯಿತು.

ಪತ್ರಕರ್ತ ರವಿ ಹೆಗಡೆ ಮುಖ್ಯ ಅತಿಥಿಯಾಗಿ ‘ಕನ್ನಡ ಮಿತ್ರರ’ ಪ್ರಯತ್ನವನ್ನು ಶ್ಲಾಘಿಸಿದರು. ಅತಿಥಿಯಾಗಿದ್ದ ಗೋವಿಂದ ನಾಯ್ಕ್ ಅವರು ಮಾತೃ ಭಾಷೆಯ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಂತೆ ಮನವಿ ಮಾಡಿದರು. ಡಾ.ವಿಶ್ವನಾಥ್ ಜೆ.ಪಿ., ಹರೀಶ್ ಶೆರಿಗಾರ್ ಮುಂತಾದವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮಿತ್ರರು ಸಂಘಟನೆಯ ಶಶಿಧರ್ ನಾಗರಾಜಪ್ಪ, ‘ಮುಂದಿನ ದಿನಗಳಲ್ಲಿ ಗಲ್ಫ್ ಪ್ರಾಂತ್ಯದಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆ ಬರೆಯಲು ದುಬೈನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯುವ ಬಗ್ಗೆ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಯವರೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದರು.

ತಮ್ಮ ಊರಿನ ಸರ್ಕಾರಿ ಶಾಲೆಗೆ ತಮ್ಮ ಒಂದು ಎಕರೆ ಜಮೀನನ್ನು ದಾನವಾಗಿ ನೀಡಿದ ಅಬ್ದುಲ್ ಲತೀಫ್ ಎಸ್.ಎಂ. ಜಹಗಿದಾರ್ ಅವರಿಗೆ  ಕನ್ನಡ ಮಿತ್ರರು ಯುಎಇ ಸಂಘಟನೆಯ ಈ ಬಾರಿಯ ‘ಕನ್ನಡ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಪಾಠ ಶಾಲೆಯ ಮಹಾ ಪೋಷಕರಾಗಿ 10 ವರ್ಷಗಳಿಂದ  ಸೇವೆ ಸಲ್ಲಿಸಿದ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಮೋಹನ್ ನರಸಿಂಹಮೂರ್ತಿಯವರಿಗೆ ‘ಕನ್ನಡ ರತ್ನ’ ಪ್ರಶಸ್ತಿ ನೀಡಲಾಯಿತು.

ಒಂದು ದಶಕದಿಂದ ಶಾಲೆಯಲ್ಲಿ ಶಿಕ್ಷಕಿಯರಾಗಿ ವೇತನ ರಹಿತ ಸೇವೆ ಸಲ್ಲಿಸಿದ ರೂಪಾ ಶಶಿಧರ್ ಮತ್ತು ಶಿಲ್ಪಾ ಸಿದ್ದಲಿಂಗೇಶ್ ರವರಿಗೆ ‘ದಶಕದ ಶಿಕ್ಷಕಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕ್ಷಿಯರಾಗಿ ವೇತನ ರಹಿತ ಸೇವೆ ಸಲ್ಲಿಸಿದ ಮಾನಸ ನವೀನ್ ಹೆಗಡೆ, ಮಂಜುಳಾ ಪ್ರಕಾಶ್ ಬಾಗಿ, ದೀಪಾ ಸೋಮಶೇಖರ್ ತೇಜಸ್ವಿ, ವಿನುತ ಸುರೇಶ್ ಮಾಸೂರ್ ಮತ್ತು ಬಿಂದು ಮಾದೇವಪ್ಪ ಕೊಪ್ಪಳ ಅವರಿಗೆ ‘ಶಿಕ್ಷಣ ಕೌಸ್ತುಭ’ ಪ್ರಶಸ್ತಿ  ಹಾಗೂ ಉಳಿದ 11 ಶಿಕ್ಷಕಿಯರಿಗೆ ‘ವರ್ಷದ ಶಿಕ್ಷಕಿ’ ಗೌರವ ಸಲ್ಲಿಸಲಾಯಿತು.

ಡಾ.ಫ್ರಾಂಕ್ ಫರ್ನಾಂಡೀಸ್, ಹರೀಶ್ ಬಂಗೇರ, ಅಬ್ದುಲ್ ಲತೀಫ್ ಮುಲ್ಕಿ, ಮಲ್ಲಿಕಾರ್ಜುನ ಗೌಡ, ಸುಚಿತ್ ಕುಮಾರ್, ಹರೀಶ್ ಯು.ಪಿ, ಇಶ್ವರಿದಾಸ್ ಶೆಟ್ಟಿ. ಉಮಾ ವಿದ್ಯಾಧರ, ಬಾಲಕೃಷ್ಣ ಸಾಲಿಯಾನ್, ಮೆಘನಾ, ಸಾಗರ್ ಶೆಟ್ಟರ್, ಡಾ.ರಶ್ಮಿ ನಂದಕಿಶೋರ್, ಮೊನಿಕಾ ಮಂದಣ್ಣ, ಸರ್ವೊತ್ತಮ ಶೆಟ್ಟಿ, ಸತೀಶ್ ಪೂಜಾರಿ, ರಾಜೇಶ್ ಕುತ್ತಾರ್, ಶೋಧನ್ ಪ್ರಸಾದ್, ಸುಗಂಧರಾಜ್ ಬೇಕಲ್, ಕಿರಣ್ ಗೌಡ, ನಿತ್ಯಾನಂದ ಬೆಸ್ಕೂರ್, ಇರ್ಶಾದ್ ಮೂಡುಬಿದಿರೆ, ವಾಸುದೇವ ಶೆಟ್ಟಿ, ಸಿದ್ದೇಶ್ ಗೌಡ, ಸತೀಶ್ ಹೆಗ್ಡೆ, ವಿಶ್ವನಾಥ್ ಶೆಟ್ಟಿ, ಮಂಜುನಾಥ್ ಸ್ವಾಮಿ ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು.

ಯುಎಇಯಲ್ಲಿರುವ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು. ಶಲಾ ವಿದ್ಯಾರ್ಥಿಗಳೇ ಕನ್ನಡದಲ್ಲಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.

ಕಾರ್ಯದರ್ಶಿ ಸುನೀಲ್ ಗವಾಸ್ಕರ್ ಸ್ವಾಗತಿಸಿದರು, ಉಪಾಧ್ಯಕ್ಷ ಸಿದ್ದಲಿಂಗೇಶ್ ಬಿ.ಆರ್ ಕನ್ನಡ ಮಿತ್ರರು ಸಂಘಟನೆಯ ಒಂದು ದಶಕದ ಕನ್ನಡ ಕಲಿಕೆಯ ಬಗ್ಗೆ ವಿವರನೀಡಿದರೆ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ‘ಕನ್ನಡ ಮಿತ್ರ’ ಪ್ರಶಸ್ತಿ ಪಡೆದವರ ಪರಿಚಯ ನೀಡಿದರು. ಸಂತೋಶ್ ಶ್ರೀಹರ್ಷ ಸಂಘಟನೆಯ ಸಮುದಾಯ ಸೇವೆಯ ವಿವರ ನೀಡಿದರು. ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಪ್ಯೋಟರ್ ಮತ್ತು ಪರಿಕರ ದೇಣಿಗೆ ಕುರಿತ ಮಾಹಿತಿಯನ್ನು ಸಂಘಟನಾ ಕಾರ್ಯದರ್ಶಿ ಬಾನು ಕುಮಾರ್ ನೀಡಿದರು. ಕಾವ್ಯ ಯುವರಾಜ್, ಬಿಂದು ಮಹದೇವ್ ಮತ್ತು ಚೇತನಾ ಗವಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ನಾಗರಾಜ್ ರಾವ್ ಉಡುಪಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT