ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಕಲ್ಲಿದ್ದಲು ಬಳಕೆ ವಿರುದ್ಧ ಡಿವೈಎಫ್‌ಐ ಮುತ್ತಿಗೆ

Published 19 ಡಿಸೆಂಬರ್ 2023, 4:45 IST
Last Updated 19 ಡಿಸೆಂಬರ್ 2023, 4:45 IST
ಅಕ್ಷರ ಗಾತ್ರ

ಉಳ್ಳಾಲ: ಇಲ್ಲಿನ ಕೋಟೆಪುರ ಸಮುದ್ರ ದಂಡೆಯಲ್ಲಿರುವ ಯುನೈಟೆಡ್ ಮರೈನ್ ಕಂಪನಿಯು ಪರಿಸರಕ್ಕೆ ಮಾರಕವಾದ ಕಲ್ಲಿದ್ದಲು ಬಳಸಿ ಮೀನು ಸಂಸ್ಕರಣೆ ಮಾಡುತ್ತಿದೆ ಎಂದು ಆರೋಪಿಸಿರುವ ಡಿವೈಎಫ್‌ಐ ಕೋಡಿ-ಕೋಟೆಪುರ ಘಟಕದಿಂದ ಉಳ್ಳಾಲ ನಗರ ಸಭೆಗೆ ಮುತ್ತಿಗೆ ಹಾಕಲಾಯಿತು.

ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಕಲ್ಲಿದ್ದಲು ಬಳಸಿ ಮೀನು ಸಂಸ್ಕರಣೆ ಮಾಡುವುದರಿಂದ ಈ ಭಾಗದ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಲ್ಲಿದ್ದಲು ಬಳಸುವುದನ್ನು ನಿಲ್ಲಿಸದಿದ್ದರೆ ಕಲ್ಲಿದ್ದಲು ತುಂಬಿಕೊಂಡು ಬರುವ ಲಾರಿಗಳನ್ನು ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸಲಿ ಎಂದು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಡಿವೈಎಫ್‌ಐ ಉಳ್ಳಾಲ ತಾಲ್ಲೂಕು ಘಟದಕ ಅಧ್ಯಕ್ಷ ರಝಾಕ್ ಮೊಂಟೆಪದವು, ಉಪಾಧ್ಯಕ್ಷರಾದ ರಝಾಕ್ ಮುಡಿಪು, ಜತೆ ಕಾರ್ಯದರ್ಶಿ ಅಮೀರ್ ಉಳ್ಳಾಲ ಬೈಲ್, ಕೋಟೆಪುರ ಘಟಕ ಅಧ್ಯಕ್ಷ ವಾಕರ್, ಕಾರ್ಯದರ್ಶಿ ನೌಫಲ್, ಮುಖಂಡರಾದ ಅಶ್ಫಾಕ್ ಕೋಟೆಪುರ, ಅಶ್ಫಾಕ್ ಅಲೇಕಳ, ಹರೇಕಳ ಗ್ರಾಮ ಸಮಿತಿ ಕೋಶಾಧಿಕಾರಿ ಬಶೀರ್ ಲಚ್ಚಿಲ್, ಸಿಐಟಿಯು ಮುಖಂಡ ಇಬ್ರಾಹಿಂ ಮದಕ ಭಾಗವಹಿಸಿದ್ದರು.

ಕೋಟೆಪುರ ಸರ್ಕಲ್‌ನಿಂದ ಉಳ್ಳಾಲ ನಗರಸಭೆವರೆಗೆ ಮೆರವಣಿಗೆ ನಡೆಸಲಾಯಿತು.

ಡಿವೈಎಫ್‌ಐ ಉಳ್ಳಾಲ ತಾಲ್ಲೂಕು ಘಟಕದ ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿದರು. ರಝಾಕ್ ಮೊಂಟೆಪದವು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT