ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾ ಪೋಷಕ ನಿಧಿ: ಜುಲೈ 25ರಂದು ವಿತರಣೆ

ಜಿಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ
Last Updated 22 ಜುಲೈ 2021, 3:50 IST
ಅಕ್ಷರ ಗಾತ್ರ

ಮಂಗಳೂರು: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಪ್ರಾಯೋಜಕತ್ವದಲ್ಲಿ 6ನೇ ವರ್ಷದ ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬುಧವಾರ ಇಲ್ಲಿ ಜರುಗಿತು .

ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷರಾದ ಸಿ ಎ ಎಸ್. ಎಸ್ . ನಾಯಕ್ ರವರು, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ‘ಈವರೆಗೆ ಸಮಾಜದ 935 ವಿದ್ಯಾರ್ಥಿಗಳಿಗೆ₹1.5 ಕೋಟಿ ಮೊತ್ತದ ವಿದ್ಯಾರ್ಥಿವೇತನದ ಪ್ರಯೋಜನವನ್ನು ವಿದ್ಯಾರ್ಥಿ ಸಮುದಾಯ ಪಡೆದುಕೊಂಡಿದೆ’ ಎಂದು ವಿವರಿಸಿದರು .

ಸಂಚಾಲಕ ಆರ್ . ವಿವೇಕಾನಂದ ಶೆಣೈ ಮಾತನಾಡಿ, ಜುಲೈ 25ರಂದು ಮಧ್ಯಾಹ್ನ 12ರಿಂದ ಮಂಗಳೂರಿನ ನಮ್ಮ ಕುಡ್ಲ ಸ್ಟುಡಿಯೋದಲ್ಲಿ ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಾ ವಿತರಣೆ ನಡೆಯಲಿದೆ. ಉಳಿದ120ಮಂದಿಗೆ ನೇರ ಖಾತೆ ವರ್ಗಾವಣೆ ಮಾಡಲಾಗುವುದು ಎಂದರು. ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ . ಯೋಗೀಶ್ ಆಚಾರ್ಯಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ಅಮೆರಿಕದ ವಾಷಿಂಗ್ಟನ್ ಡಿ.ಸಿ. ಐಸಿಎಐ ಚ್ಯಾಪ್ಟರ್‌ ಅಧ್ಯಕ್ಷರ ಸಿ ಎ ಗೋಕುಲದಾಸ್ ಪೈ ಉದ್ಘಾಟಿಸುವರು ಎಂದರು. ಸುಬ್ರಹ್ಮಣ್ಯ ಪ್ರಭು, ಪಿ ಸುರೇಶ ಶೆಣೈ , ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT