ಗುರುಗಳು ಸ್ವಾಭಿಮಾನದ ಸಂಕೇತ : ಅತ್ರಾಡಿ ಅಮೃತ ಶೆಟ್ಟಿ

7
ಬೆಳ್ತಂಗಡಿ ಯುವವಾಹಿನಿಯಿಂದ ಗುರುನಮನ

ಗುರುಗಳು ಸ್ವಾಭಿಮಾನದ ಸಂಕೇತ : ಅತ್ರಾಡಿ ಅಮೃತ ಶೆಟ್ಟಿ

Published:
Updated:
Deccan Herald

ಬೆಳ್ತಂಗಡಿ: ‘ನಾರಾಯಣ ಗುರುಗಳು ಸಾಮಾಜಿಕವಾಗಿ ಹಿಂದುಳಿದವರ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಅವರ ಉದ್ಧೇಶ ಸಮಾಜ ಸೇವೆಯಾಗಿರದೆ ಸಾಮಾಜಿಕ ಪರಿವರ್ತನೆಯಾಗಿತ್ತು’ ಎಂದು  ಚಿಂತಕಿ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು.

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ  ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿಯ ಪ್ರಯುಕ್ತ ಗುರುವಾಯನಕೆರೆ ಶ್ರೀ ಶಾರದಾ ಮಂಟಪದಲ್ಲಿ ಸೋಮವಾರ ನಡೆದ ಗುರು ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ದೇವಸ್ಥಾನದ ಬದಲು ಗ್ರಂಥಾಲಯ ನಿರ್ಮಿಸಿ, ಆ ಮೂಲಕ ತಿಳಿವಳಿಕೆಯುಳ್ಳ ಸಮಾಜವನ್ನು ರೂಪಿಸಿ ಎಂದು ಕರೆ ನೀಡಿದ ನಾರಾಯಣ ಗುರುಗಳು ಸಾರ್ವಕಾಲಿಕವಾದ ವಿಚಾರಗಳನ್ನು ಸಮಾಜಕ್ಕೆ ನೀಡಿದ್ದಾರೆ. ಪ್ರತಿಯೊಬ್ಬರೂ ಗೌರವಿಸಬೇಕಾದ ಅವರ ಜಯಂತಿ ಆಚರಣೆ ಒಂದು ಸಮಾಜದ ಮೂಲಕ ಮಾತ್ರ ನಡೆಯುತ್ತಿರುವುದು ಈ ಸಮಾಜದ ದುರಂತ’ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ ಮಾತನಾಡಿ ನಾರಾಯಣ ಗುರುಗಳ ತತ್ವ ಸಂದೇಶಗಳು ಬದುಕಿನ ಬೆಳಕಾಗಿದೆ. ಅವರ ವಿಚಾರಗಳು ಒಂದು ದಿನಕ್ಕೆ ಸೀಮಿತವಾಗದೆ ಬದುಕಿನುದ್ದಕ್ಕೂ ಪಾಲಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಿನಾಥ ನಾಯಕ್, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಗುರುವಾಯನಕೆರೆ ಗೆಳೆಯರ ಬಳಗದ ಅಧ್ಯಕ್ಷ ರಾಜೇಶ್ ಕುಲಾಲ್, ಕುಲಾಲರ ಯುವ ವೇದಿಕೆಯ ತಾಲೂಕು ಅಧ್ಯಕ್ಷ ಲೋಕೇಶ್, ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷೆ ರೀತಾ ವೈ ಆಚಾರ್ಯ ಇದ್ದರು.

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶಾರದಾ ಮಂಟಪಕ್ಕೆ ₹ 21 ಸಾವಿರ ಮೌಲ್ಯದ ಪೀಟೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯದರ್ಶಿ ಜಯರಾಜ್ ನಡಕ್ಕರ ಪ್ರಾರ್ಥಿಸಿದರು. ಘಟಕದ ನಿರ್ದೇಶಕ ರಾಕೇಶ್ ಬಿ.ಎಲ್ ಸ್ವಾಗತಿಸಿ, ಸುಧಾಮಣಿ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಉಮೇಶ್ ಸುವರ್ಣ ಧನ್ಯವಾದ ಸಲ್ಲಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !