ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿ ನಲಿಕೆಗೆ ಹರಭಜನ್‌ ಸಿಂಗ್, ಜಾಂಟಿ ರೋಡ್ಸ್‌

Published 20 ಅಕ್ಟೋಬರ್ 2023, 12:56 IST
Last Updated 20 ಅಕ್ಟೋಬರ್ 2023, 12:56 IST
ಅಕ್ಷರ ಗಾತ್ರ

ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನ ಮತ್ತು ನಮ್ಮ ಟಿವಿ ದಸರಾ ಅಂಗವಾಗಿ ಆಯೋಜಿಸಿರುವ ‘ಪಿಲಿನಲಿಕೆ’ (ಹುಲಿ ಕುಣಿತ) ಇದೇ 23ರಂದು ಉರ್ವ ಮೈದಾನದಲ್ಲಿ ನಡೆಯಲಿದ್ದು ಆಫ್‌ ಸ್ಪಿನ್ನರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರಭಜನ್ ಸಿಂಗ್ ಮತ್ತು ಫೀಲ್ಡಿಂಗ್ ಮಾಂತ್ರಿಕ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ‘ಈ ವರ್ಷ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮೊತ್ತವನ್ನು ಕ್ರಮವಾಗಿ ₹ 5 ಲಕ್ಷ, ₹ 3 ಲಕ್ಷ ಮತ್ತು ₹ 2 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವುದು. ವೈಯಕ್ತಿಕ ಪ್ರಶಸ್ತಿಗಳು ಕೂಡ ಇವೆ. ಹರಭಜನ್ ಸಿಂಗ್‌, ಜಾಂಟಿ ರೋಡ್ಸ್‌ ಜೊತೆಯಲ್ಲಿ ಚಿತ್ರನಟರಾದ ಸುನಿಲ್ ಶೆಟ್ಟಿ, ಋಷಭ್ ಶೆಟ್ಟಿ, ರಾಜ್ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಪ್ರೇಕ್ಷಕರಿಗೆ ಅನುಕೂಲ ಆಗುವಂತೆ 20 ಸಾವಿರ ಚದರ ಅಡಿಯ ಜರ್ಮನ್ ಟೆಂಟ್ ಅಳವಡಿಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರುತ್ತದೆ. 10 ತಂಡಗಳು ಪಾಲ್ಗೊಳ್ಳಲಿದ್ದು ಯಾರಿಗೂ ತೊಂದರೆ ಆಗದಂತೆ ಮಧ್ಯರಾತ್ರಿಗೂ ಮೊದಲು ಕಾರ್ಯಕ್ರಮ ಮುಗಿಸಲಾಗುವುದು’ ಎಂದು ಅವರು ತಿಳಿಸಿದರು.

‘ಬೆಳಿಗ್ಗೆ 10 ಗಂಟೆಗೆ ಕಟಪಾಡಿ ಆನೆಗುಂದಿ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್‌ ಉದ್ಘಾಟಿಸುವರು’ ಎಂದು ಅವರು ವಿವರಿಸಿದರು.

ಪಿಲಿ ನಲಿಕೆಯಿಂದ ಪ್ರೇರಣೆಗೊಂಡು ಮಂಗಳೂರು, ಪುತ್ತೂರು ಮತ್ತಿತರ ಕಡೆಗಳಲ್ಲಿ ಹುಲಿ ಕುಣಿತದ ಕಾರ್ಯಕ್ರಮಗಳು ಅರಂಭವಾಗಿವೆ. ಇದು ಖುಷಿಯ ಸಂಗತಿ. ಈ ಕಲೆಯನ್ನು ಉಳಿಸುವ ಉದ್ದೇಶದೊಂದಿಗೆ ಅವರೆಲ್ಲರಿಗೂ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಶಿವಶರಣ್ ಶೆಟ್ಟಿ, ಅವಿನಾಶ್‌ ಮತ್ತು ವಿಕಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT