ಬೆಳ್ತಂಗಡಿ: ‘ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಮುದಾಯ ಮಟ್ಟದಲ್ಲಿ ಯೋಗಕ್ಷೇಮ ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಉಜಿರೆಯ ಬೆನಕ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ತಿಳಿಸಿದರು.

ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮದ ಅಂಗವಾಗಿ ಆಸ್ಪತ್ರೆ, ಬೆನಕ ಚಾರಿಟಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕಲ್ಮಂಜ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ಅಧ್ಯಕ್ಷತೆ ವಹಿಸಿದ್ದರು.

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಅಂಕಿತಾ ಜಿ.ಭಟ್ ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲ್ಮಂಜ ಶಾಲೆಯ ಶತಮಾನೋತ್ಸವ ಸಮಿತಿ ಗೌರವ ಸಲಹೆಗಾರ ಶುಭಚಂದ್ರರಾಜ ಜೈನ್, ವೇಣೂರು ಪೊಲೀಸ್ ಠಾಣೆಯ ಸಹಾಯಕ ಪಿಎಸ್ಐ ರಾಮಯ್ಯ ಹೆಗ್ಡೆ, ಶಾಲಾ ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಮೋನಪ್ಪ ಟಿ., ಉಜಿರೆಯ ಎಸ್.ಎ.ಮೆಡಿಕಲ್ಸ್ನ ಪ್ರಕಾಶ್ ಫರ್ನಾಂಡಿಸ್, ಶಾಲೆಯ ಹಿರಿಯ ವಿಧ್ಯಾರ್ಥಿ ಕುಕ್ಕೆಮಜಲು ಕೊರಗಪ್ಪ ಗೌಡ, ಪ್ರವೀಣ್ ಫರ್ನಾಂಡಿಸ್, ಅಬ್ದುಲ್ ಅಜೀಜ್ ನಿಡ್ಗಲ್ ಭಾಗವಹಿಸಿದ್ದರು.

ತಪಾಸಣಾ ಶಿಬಿರದಲ್ಲಿ ಡಾ.ಆದಿತ್ಯ ರಾವ್, ಡಾ.ಅಂಕಿತಾ ಜಿ.ಭಟ್, ಡಾ.ರೋಹಿತ್ ಜಿ.ಭಟ್, ಡಾ.ವಿಜೇತ್ ರೈ, ಡಾ.ಶಂತನು ಪ್ರಭು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.