ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಇಂದಿನಿಂದ ‘ಹೈ ಲೈಫ್’ ಪ್ರದರ್ಶನ

ಶುಭಸಮಾರಂಭಗಳ ಉಡುಪು, ಆಧುನಿಕ ಜೀವನಶೈಲಿಯ ಸಾಮಗ್ರಿಗಳ ಪ್ರದರ್ಶನ
Last Updated 18 ಜೂನ್ 2022, 11:16 IST
ಅಕ್ಷರ ಗಾತ್ರ

ಮಂಗಳೂರು: ಫ್ಯಾಷನ್ ಮತ್ತು ಲೈಫ್‌ ಸ್ಟೈಲ್‌ ಉಡುಪುಗಳಿಗೆ ಸಂಬಂಧಿಸಿ ಭಾರತದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಹೈ ಲೈಫ್ ಉಡುಪುಗಳ ಪ್ರದರ್ಶನ ಭಾನುವಾರ ಮತ್ತು ಸೋಮವಾರ ನಗರದಲ್ಲಿ ನಡೆಯಲಿದೆ. ಕೊಡಿಯಾಲ್‌ಬೈಲ್‌ನ ನವಭಾರತ್‌ ವೃತ್ತದಲ್ಲಿರುವ ದಿ ಓಷನ್ ಪರ್ಲ್‌ ಹೋಟೆಲ್‌ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಮದುವೆ–ಮುಂಜಿ ಮುಂತಾದ ಸಮಾರಂಭಗಳಲ್ಲಿ ಧರಿಸುವ ವಸ್ತ್ರೋತ್ಪನ್ನಗಳು ಗಮನ ಸೆಳೆಯಲಿವೆ.

‘30ಕ್ಕೂ ಹೆಚ್ಚು ನಗರಗಳಲ್ಲಿ 100ಕ್ಕೂ ಅಧಿಕ ಪ್ರದರ್ಶನಗಳನ್ನು ನಡೆಸಲಾಗಿದೆ. ಮಂಗಳೂರಿಗೆ ಇದೇ ಮೊದಲ ಬಾರಿಹೈ ಲೈಫ್ ಕಾಲಿರಿಸಿದೆ. ಉಡುಪು, ಶೂಗಳು, ಆಭರಗಣಗಳು, ಗೃಹಾಲಂಕಾರ ವಸ್ತುಗಳು, ಫರ್ನಿಚರ್‌ಗಳು, ಉಡುಗೊರೆ, ಕಲಾಕೃತಿ, ಫ್ಯಾಷನ್ ಪರಿಕರಗಳು ಇತ್ಯಾದಿ ಒಂದೇ ಸೂರಿನಡಿ ಸಿಗುವುದು ಹೈ ಲೈಫ್‌ನ ವೈಶಿಷ್ಟ್ಯ. 100ಕ್ಕೂ ಹೆಚ್ಚು ವಿನ್ಯಾಸಕರು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ವ್ಯವಸ್ಥಾಪಕ ಡೊಮಿನಿಕ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಧುನಿಕ ಶೈಲಿಯ ಉತ್ಪನ್ನಗಳ ಪ್ರದರ್ಶನ–ಮಾರಾಟದಲ್ಲಿ ಗ್ರಾಹಕರಿಗೆ ನೂತನ ತಂತ್ರಜ್ಞಾನದ ಮಾಹಿತಿಯನ್ನು ಒದಗಿಸಲಾಗುವುದು. ಆಕರ್ಷಕ ಬೆಲೆಯೂ ಆಕರ್ಷಕವಾಗಿದೆ. ಆಯ್ಕೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಜೀವನ ಪದ್ಧತಿಗೆ ಸಂಬಂಧಿಸಿದ ಧಿರಿಸುಗಳ ಮಾರಾಟದಲ್ಲಿ ‘ಹೈ ಲೈಫ್‌ ಎಕ್ಸಿಬಿಷನ್‌’ ದೇಶದಾದ್ಯಂತ ಗಮನ ಸೆಳೆದಿದ್ದು ಮದುವೆ ಸಮಾರಂಭದಲ್ಲಿ ತೊಡುವ, ವಿಶೇಷವಾಗಿ ವಧು–ವರರು ಧರಿಸುವ ಬಟ್ಟೆ ಮತ್ತು ಆಭರಣಗಳ ಬೃಹತ್ ಸಂಗ್ರಹ ಹೊಂದಿದೆ. ದೇಶದ ಪ್ರಮುಖ ಕಡೆಗಳಲ್ಲಿ ಪ್ರದರ್ಶನ ಏರ್ಪಡಿಸಿ ಜನರ ಮನ ಗೆದ್ದಿದೆ. ಮದುವೆಗೆ ಸಂಬಂಧಿಸಿದ ಸಂಪೂರ್ಣ ಬಟ್ಟೆಬರೆಗಳು ಇಲ್ಲಿದ್ದು ಸಮಾರಂಭಕ್ಕೆ ಅದ್ದೂರಿ ಸ್ಪರ್ಶ ನೀಡುವ ಮತ್ತು ಕಳೆ ತುಂಬುವ ವೈವಿಧ್ಯಮಯ ಬಟ್ಟೆಗಳು ಪ್ರದರ್ಶನಗೊಳ್ಳಲಿವೆ.

ಅಂದ ಚಂದ ಮತ್ತು ಐಷಾರಾಮಿ ಜೀವನ ಶೈಲಿಯನ್ನು ಇಷ್ಟಪಡುವವರಿಗೆ ವಿವಾಹದ ಉಡುಪು ಮತ್ತು ಆಭರಣಗಳ ಆಯ್ಕೆಗೆ ಧಾರಾಳ ಅವಕಾಶಗಳು ಇಲ್ಲಿದ್ದು ವಿಶ್ವದರ್ಜೆಯ ವಿನ್ಯಾಸಗಳು ಸಿಗಲಿವೆ. ಆಧುನಿಕತೆಗೆ ಒಗ್ಗಿಕೊಳ್ಳುತ್ತ ಸಮಕಾಲೀನ ಉಡುಪನ್ನು ಮೆಚ್ಚುವವರು ಮತ್ತು ಅಚ್ಚುಕಟ್ಟಾದ ಮದುವೆ ಸಮಾರಂಭ ಏರ್ಪಡಿಸಲು ಇಚ್ಛಿಸುವ ಪ್ರತಿಯೊಬ್ಬರೂ ಈ ಪ್ರದರ್ಶನಕ್ಕೆ ತಪ್ಪದೆ ಭೇಟಿ ನಿಡಬೇಕು ಎಂದು ಅವರು ತಿಳಿಸಿದರು. ಯಶವಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT