ಪುತ್ತೂರು : ಪುತ್ತೂರು ನಗರದ ಹೊರವಲಯದಲ್ಲಿರುವ ಮುಕ್ರಂಪಾಡಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಜಾಗದ ಅಭಾವ ಇರುವುದರಿಂದ ಪುತ್ತೂರಿಗೆ ನೂತನ ಕೈಗಾರಿಕಾ ನಿವೇಶನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದು ಹಾಗೂ ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಶಾಸಕರ ಜೊತೆ ಸಮಾಲೋಚನೆ ನಡೆಸುವುದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮುಂದಿನ ಯೋಜನಗಳಾಗಿವೆ ಎಂದು ಸಂಘದ ಅಧ್ಯಕ್ಷ ಜಿ.ಸುರೇಂದ್ರ ಕಿಣಿ ಅವರು ತಿಳಿಸಿದರು.

ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ತುಂಬಿದ್ದು, 50ಕ್ಕೂ ಅಧಿಕ ಕೈಗಾರಿಕೆಗಳಿವೆ. ಇನ್ನು ಮುಂದೆ ಕೈಗಾರಿಕೆಗಳನ್ನು ಆರಂಭಿಸಲು ಜಾಗದ ಸಮಸ್ಯೆ ಇರುವುದರಿಂದ ನೂತನ ಕೈಗಾರಿಕಾ ನಿವೇಶನದ ಅಗತ್ಯವಿದೆ ಎಂದರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ 339 ಅಜೀವ ಸದಸ್ಯರು ಸೇರಿದಂತೆ ಒಟ್ಟು 562 ಮಂದಿ ಸದಸ್ಯರಿದ್ದಾರೆ. ಸಂಘವು ವರ್ತಕರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಪುತ್ತೂರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದೆ. ಪುತ್ತೂರು ನಗರಸಭೆಯ ನೆಕ್ಕಲು ಡಂಪಿಂಗ್ ಯಾಡರ್್ನಲ್ಲಿ ತ್ಯಾಜ್ಯಗಳ ಮರುಬಳಕೆ ಸೂತ್ರವನ್ನು ಅಳವಡಿಸುವ ಕುರಿತು ನಗರಸಭೆಯ ಪೌರಾಯುಕ್ತರ ಜತೆ ಚಚರ್ಿಸುವುದು, ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೆಲವು ಸೂತ್ರಗಳನ್ನು ಅಳವಡಿಸಲು ಪುತ್ತೂರು ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸುವುದು . ಈ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಂಘದ ನಿಧರ್ಾರಗಳಾಗಿವೆ ಎಂದರು.

ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಕಾಯರ್ಾಚರಿಸುತ್ತಿದ್ದ ಕೈಗಾರಿಕಾ ಇಲಾಖೆಯು ಸಿಬ್ಬಂದಿ ಕೊರತೆಯಿಂದಾಗಿ ಮುಚ್ಚಲ್ಪಟ್ಟಿದ್ದು, ಇದನ್ನು ಪುನರಾರಂಭಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ ಅವರು ಪುತ್ತೂರಿನ ಪ್ರಮುಖ ಹಾಗೂ ಎಲ್ಲಾ ರಸ್ತೆಗಳ ಚರಂಡಿಗಳನ್ನು ಮಳೆಗಾಲಕ್ಕೆ ಮುನ್ನವೇ ನೀರು ಸಂಚಾರಕ್ಕೆ ಸುಗಮಗೊಳಿಸಬೇಕು ಎಂಬ ಸಂಘದ ಮನವಿಗೆ ಉಪವಿಭಾಗಾಧಿಕಾರಿಗಳು ಸ್ಪಂದಿಸಿ, ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕಾರ್ಯಗತಗೊಳಿಸಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ಕಂಬಳ ಗದ್ದೆಯ ಕೆರೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಸಂಘದ ಮನವಿಗೆ ಸ್ಪಂದಿಸಿರುವ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಅವರು ಅಭಿವೃದ್ಧಿಯ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ದರ್ಬೆ,ಖಜಾಂಚಿ ಜೇಮ್ಸ್.ಜೆ.ಮಾಡ್ತಾ , ಸದಸ್ಯರಾದ ಗಣೇಶ್ ಮತ್ತು ರಾಜೇಶ್ ಯು.ಬಿ ಇದ್ದರು.

ಕಾನೂನಿಗೆ ಬದ್ಧ: ‘ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಕಾನೂನು ರೀತಿಯಲ್ಲಿ ವ್ಯವಹರಿಸುವ ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಬದ್ಧವಾಗಿದೆ. ಆದರೆ ಕಾನೂನು ಉಲ್ಲಂಘಿಸಿ ವ್ಯವಹರಿಸುವವರಿಗೆ ಸಹಕಾರ ನೀಡುವುದಿಲ್ಲ. ಕಾನೂನು ಉಲ್ಲಂಘಿಸಿ ನಡೆಸುವ ಕಟ್ಟಡ ಕಾಮಗಾರಿಗಳನ್ನು ಕೂಡ ಬೆಂಬಲಿಸುವುದಿಲ್ಲ’ ಎಂದು ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಅವರು ಸ್ಪಷ್ಟಪಡಿಸಿದರು.

ಮಹಾಸಭೆ ನಾಳೆ

‘ಸಂಘದ 38ನೇ ಮಹಾಸಭೆಯು ಜುಲೈ1ರಂದು ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯುವುದು. ಮಾಜಿ ಅಧ್ಯಕ್ಷರುಗಳಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ, ಹಿರಿಯ ಸದಸ್ಯರಿಗೆ ಸನ್ಮಾನ, 2018-19ರ ಸಾಲಿನ ಸಮಿತಿಗೆ ಚುನಾವಣೆ ನಡೆಯುವುದು’ ಎಂದು ಸಂಘದ ಅಧ್ಯಕ್ಷ ಜಿ.ಸುರೇಂದ್ರ ಕಿಣಿ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.