ಮೂಡುಬಿದಿರೆ: ತಾಲ್ಲೂಕಿನ ಹೊಸಬೆಟ್ಟು ಗ್ರಾಮದ ಕೊನ್ನೆಪದವು ಎಂಬಲ್ಲಿರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆ ಖಾಲಿ ಇದ್ದು, ಸುಮಾರು ಒಂದು ವರ್ಷದಿಂದ ಈ ಕಟ್ಟಡ ಬಾಗಿಲು ಮುಚ್ಚಿದೆ. ಇದರಿಂದ ಜಾನುವಾರುಗಳಿಗೆ ಪಶುವೈದ್ಯಕೀಯ ಸೇವೆ ಲಭಿಸುತ್ತಿಲ್ಲ.

ಹೊಸಬೆಟ್ಟು, ಪುಚ್ಚೆಮೊಗರು, ಇರುವೈಲು ಮತ್ತು ತೋಡಾರು ಗ್ರಾಮಗಳ ರೈತರ ಅನುಕೂಲಕ್ಕಾಗಿ ಕೊನ್ನೆಪದವಿನಲ್ಲಿ ಪಶುಚಕಿತ್ಸಾ ಕೇಂದ್ರ ಆರಂಭಿಸಲಾಗಿತ್ತು. ಈ ಪರಿಸರದವರು ಜೀವನ ನಿರ್ವಹಣೆಗಾಗಿ ಭತ್ತ, ಅಡಿಕೆ, ತೆಂಗು ಕೃಷಿಯನ್ನು ಪ್ರಧಾನ ಕಸುಬಾಗಿಸಿದ್ದು, ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಹೊಸಬೆಟ್ಟು ಮತ್ತು ಇರುವೈಲು ಗ್ರಾಮದಲ್ಲಿ ಒಂದೊಂದು ಹಾಲಿನ ಡೇರಿ ಇದೆ. ಎರಡು ಡೇರಿಗಳಿಗೆ 400ಕ್ಕೂ ಅಧಿಕ ಕೃಷಿಕರು ನಿತ್ಯ ಹಾಲು ಪೂರೈಸುತ್ತಿದ್ದಾರೆ.

ಒಂದು ವರ್ಷದಿಂದ ಹೊಸಬೆಟ್ಟು ಹಾಗೂ ಇರುವೈಲು ಪಂಚಾಯಿತಿ ಪರಿಸರದ ರೈತರು ಪಶುವೈದ್ಯರ ಸೇವೆಯಿಂದ ವಂಚಿತರಾಗಿದ್ದಾರೆ. ಇಲ್ಲಿನ ರೈತರು ದೂರದ ಮೂಡುಬಿದಿರೆ ಪಶು ಆರೋಗ್ಯ ಕೇಂದ್ರದ ವೈದ್ಯರನ್ನು ಅವಲಂಬಿಸಬೇಕಾಗಿದೆ.

ಹೊಸಬೆಟ್ಟು ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿಗೆ ಪಶುವೈದ್ಯಕೀಯ ಪರೀಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಪಶು ವೈದ್ಯರಿಗೆ, ಪರೀಕ್ಷಕರಿಗೆ ಒಂದು ಕಡೆ ನಿಯೋಜನೆಯಾದರೆ ಹೆಚ್ಚುವರಿಯಾಗಿ ಬೇರೆ ಗ್ರಾಮಗಳಲ್ಲೂ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ನೀಡುವುದರಿಂದ ಕೆಲವರು ಕೆಲವೇ ದಿನಗಳಲ್ಲಿ ವರ್ಗವಾಗಿ ಹೋಗುತ್ತಾರೆ. ಈ ಮೊದಲು ಇಲ್ಲಿದ್ದ ಪಶು ವೈದ್ಯಕೀಯ ಪರೀಕ್ಷಕರು ವರ್ಗವಾಗಿದ್ದರಿಂದ ಕೊನ್ನೆಪದವಿನ ಪಶು ಚಿಕಿತ್ಸಾ ಕೇಂದ್ರ ಬಾಗಿಲು ಮುಚ್ಚಿದೆ. ಇಲ್ಲಿಗೆ ಸಿಬ್ಬಂದಿ ನೀಡುವಂತೆ ಗ್ರಾಮ ಸಭೆಗಳಲ್ಲಿ ಪ್ರಸ್ತಾಪವಾದರೂ ಸ್ಪಂದನೆ ಸಿಕ್ಕಿಲ್ಲ. ಕಟ್ಟಡ ಖಾಲಿ ಇರುವುದರಿಂದ ಸುತ್ತಮುತ್ತ ಗಿಡಗಂಟಿ ಬೆಳೆದು ಪಾಳುಬಿದ್ದ ಕಟ್ಟಡದಂತಿದೆ.

ಕೊನ್ನೆಪದವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದಲ್ಲಿದ್ದ ಈ ಹಿಂದಿನ ಹಿರಿಯ ಪಶುವೈದ್ಯಕೀಯ ಪರೀಕ್ಷಕರು ವರ್ಗಾವಣೆ ಆಗಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ಇಲ್ಲಿಗೆ ಬೇರೆ ಕಡೆಯ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಸರ್ಕಾರ ಸರಕಾರ ಕ್ರಮಕೈಗೊಂಡಿದ್ದು, ಶೀಘ್ರದಲ್ಲೆ ಇಲ್ಲಿನ ರೈತರಿಗೆ ಸ್ಥಳೀಯ ಮಟ್ಟದಲ್ಲೇ ಸೇವೆ ಪುನರಾರಂಭವಾಗಲಿದೆ ಎಂದು ಮೂಡುಬಿದಿರೆ ಪಶುವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.