ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಕಣ್ಗಾವಲು: 320 ಕಿ.ಮೀ. ವ್ಯಾಪ್ತಿಯಲ್ಲಿ ನಿರಂತರ ಗಸ್ತು

Last Updated 19 ಏಪ್ರಿಲ್ 2020, 19:34 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಕರಾವಳಿ ಕಾವಲು ಪಡೆಯ ಕಣ್ಗಾವಲು ಮತ್ತು ವಿಚಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು, ವರಹಾ ಕಣ್ಗಾವಲು ಹಡಗು ಮತ್ತು ಡಾರ್ನಿಯರ್ 785 ವಿಮಾನದಿಂದ ಕಣ್ಗಾವಲು ಹೆಚ್ಚಿಸಲಾಗಿದೆ.

ಕರ್ನಾಟಕ ಕರಾವಳಿ ತೀರದಲ್ಲಿ ಸಮುದ್ರ ತೀರಗಳು ಮತ್ತು ವೈಮಾನಿಕ ಕಣ್ಗಾವಲು ಎರಡನ್ನೂ ಭಾನುವಾರದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡೆಂಟ್‌ ಎಸ್.ಬಾಬು ವೆಂಕಟೇಶ್ ತಿಳಿಸಿದ್ದಾರೆ.

ಹಡಗು ಹಾಗೂ ವಿಮಾನಗಳ ಸಮನ್ವಯದಿಂದ ಸಮುದ್ರದಲ್ಲಿ ಕಣ್ಗಾವಲು ನಡೆಸಲಾಗುತ್ತಿದೆ. ಯಾವುದೇ ಶಂಕಿತ ಹಡಗನ್ನು ತಡೆಗಟ್ಟಲು ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ವಿಮಾನಗಳು ಈ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸುತ್ತಿವೆ.

ಇದಲ್ಲದೆ, ವೇಗದ ಇಂಟರ್‌ಸೆಪ್ಟರ್ ಬೋಟ್‌ಗಳಾದ ಸಿ 448, ಸಿ 420 ಮತ್ತು ಸಿ 155 ಗಳನ್ನು ಎಲ್ಲ ಮೀನುಗಾರಿಕಾ ದೋಣಿಗಳ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ. ಕಾರವಾರದಿಂದ ಕಾಸರಗೋಡುವರೆಗಿನ ಕರಾವಳಿಯ 320 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದುಷ್ಕೃತ್ಯಗಳನ್ನು ತಡೆಯಲು ಈ ಕಣ್ಗಾವಲು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT