ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಮಾನಿನಿಯರ ಬದುಕಿಗೆ ಯೋಗ’ಬಲ’

ಕುಶಾಲಪ್ಪ ಗೌಡ ಎನ್., ಯೋಗ ಶಿಕ್ಷಕ
Published 21 ಜೂನ್ 2024, 7:32 IST
Last Updated 21 ಜೂನ್ 2024, 7:32 IST
ಅಕ್ಷರ ಗಾತ್ರ

ಮಂಗಳೂರು: ಈ ಬಾರಿ ಯೋಗ ದಿನಾಚರಣೆಯ ಘೋಷವಾಕ್ಯ ‘ಮಹಿಳಾ ಸಬಲೀಕರಣಕ್ಕೆ ಯೋಗ’. ಯೋಗ ಪದದ ಅರ್ಥವೇ ಮಾನವ ಪ್ರಜ್ಞೆ ಮತ್ತು ಪರಮಾತ್ಮನ ಅರಿವು. ಸಬಲೀಕರಣವೆಂದರೆ ಸ್ವ ಸಾಮರ್ಥ್ಯದ ಅರಿವು ಹಾಗೂ ಪ್ರಜ್ಞಾಪೂರ್ವಕ ನಿರ್ಧಾರದಿಂದ ಸ್ವ ಅಭಿವೃದ್ಧಿ ಜೊತೆಗೆ ಸರ್ವರ ಶ್ರೇಯಸ್ಸಿಗೆ ಶ್ರಮಿಸುವುದಾಗಿದೆ.

ಮಹಿಳೆಗೆ ಸ್ವಾವಲಂಬಿ ಬದುಕಿಗೆ ಯೋಗವೂ ಒಂದು ದಾರಿ. ಯೋಗ ಶಿಕ್ಷಕಿಯಾಗಿ, ಚಿಕಿತ್ಸಕಿಯಾಗಿ, ವೈಯಕ್ತಿಕ ಆರೋಗ್ಯ ಸಂಸಾರದ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ಯೋಗ ಅತ್ಯುತ್ತಮ ವಿದ್ಯೆ.

ಮಹಿಳೆಯರ ಆರೋಗ್ಯವೆಂದರೆ ದೈಹಿಕ ಕ್ಷಮತೆ ಮಾತ್ರವಲ್ಲ, ಪ್ರಶಾಂತ ಮನಸ್ಸು, ಸಮಚಿತ್ತದ ಭಾವ, ಆಧ್ಯಾತ್ಮಿಕ ಅನುಭೂತಿ ಎಲ್ಲವನ್ನೂ ಒಳಗೊಂಡಿದೆ. ಯೋಗ ಸಾಧನೆಯಿಂದ ಇದನ್ನು ದಕ್ಕಿಸಿಕೊಳ್ಳಲು ಸಾಧ್ಯ. ಭಾರತದ ಋಷಿ ಪರಂಪರೆಯಲ್ಲಿ ಹಲವಾರು ಸಾಧಕಿಯರು ಇದ್ದಾರೆ. ‘ಯೋಗಿನಿ’ಯರ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಹೀಗೆ, ಯೋಗದ ಪ್ರಯೋಜನಗಳು ಹಲವು.

ಗರ್ಭಾವಸ್ಥೆಯಿಂದ ಜೀವನದ ಕೊನೆಯ ದಿನದವರೆಗೆ ಯೋಗದ ಪ್ರಸ್ತುತತೆಯನ್ನು ‘ಹರಯೋಗ ಪ್ರದೀಪಿಕಾ’ದಲ್ಲಿ ವಿವರಿಸಲಾಗಿದೆ. ಆಧುನಿಕ ವಿಜ್ಞಾನವು ಗರ್ಭಾವಸ್ಥೆಯಲ್ಲಿ ಯೋಗದ ಅಗತ್ಯ, ಮರಣಶಯ್ಯೆಯಲ್ಲಿರುವಾಗ ಯೋಗದ ಸಾಂಗತ್ಯ ಏನು ಎಂಬುದನ್ನು ವಿವರಿಸುತ್ತದೆ. ಉದಾಹರಣೆಗೆ, ಯೋಗ ನಿದ್ರಾಸನ ಭಂಗಿಯು ತಾಯಿಯ ಗರ್ಭದಲ್ಲಿ ಮಗು ಇರುವ ಸ್ಥಿತಿಯನ್ನು ಹೋಲುವ ವಿನ್ಯಾಸವಾಗಿ ಮೂಡಿಬಂದರೆ, ಶವಾಸನವು ಮರಣ ಭಯವನ್ನು ಹೋಗಲಾಡಿಸುವ ವಿನ್ಯಾಸವಾಗಿದೆ.

ಸಾಧನೆಗೆ ಯೋಗ ಪೂರಕ: ದೇಹದ ಆರೋಗ್ಯ ಕಾಪಾಡಲು ಯೋಗಾಭ್ಯಾಸದ ಶುದ್ಧೀಕರಣ ಕ್ರಿಯೆ, ಯೋಗಾಸನಗಳು, ಬಂಧ, ಮುದ್ರೆಗಳು ಸಹಕಾರಿ. ಮಾನಸಿಕ ಸ್ಥಿರತೆ ಹೊಂದಲು ಪ್ರಾಣಾಯಾಮ ಪರಿಣಾಮಕಾರಿ. ಸಾಧನೆಯೇ ಆಧ್ಯಾತ್ಮಿಕ ಅನುಭವವಾಗಿ, ಸರ್ವರನ್ನು ಸಮಾನವಾಗಿ ಸ್ವೀಕರಿಸುವ ಉನ್ನತ ಸ್ಥಿತಿಯಾಗುತ್ತದೆ.

ಸೌಂದರ್ಯ ಪ್ರಜ್ಞೆಗೂ ಯೋಗ ಉತ್ತಮ ಸಾಧನ. ಸಹನೆ, ಸಹಾನುಭೂತಿ, ಮಮಕಾರ, ವಾತ್ಸಲ್ಯದಂತಹ ಆಂತರಿಕ ಸೌಂದರ್ಯದ ಜೊತೆಗೆ ದೇಹದ ಮೈಕಟ್ಟು, ಮುಖದ ಹೊಳಪು, ಮಾಂಸಖಂಡಗಳ ಕ್ಷಮತೆ ಕಾಪಾಡಿಕೊಳ್ಳಲು ನಿತ್ಯ ಸೂರ್ಯ ನಮಸ್ಕಾರ ರೂಢಿಸಿಕೊಳ್ಳಬಹುದು. ಕುಟುಂಬದ ಜವಾಬ್ದಾರಿ, ವೃತ್ತಿಯ ಹೊಣೆ ಎರಡನ್ನೂ ನಿಭಾಯಿಸುವ ಉದ್ಯೋಗಸ್ಥ ಮಹಿಳೆಗೆ ಒತ್ತಡ ಸಹಜ. ನಿತ್ಯ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ, ನೆಮ್ಮದಿ ಜೀವನ ನಡೆಸಬಹುದು. ಗರ್ಭಿಣಿಯರು ನಿತ್ಯ ಯೋಗಾಭ್ಯಾಸ ಮಾಡಿದರೆ, ದೇಹ ತೂಕ ನಿರ್ವಹಣೆ, ಸಾಮಾನ್ಯ ಹೆರಿಗೆಗೆ ಸಹಕಾರಿಯಾಗಬಹುದು.

ಮೆನೊಪಾಸ್ (ಮುಟ್ಟು ನಿಲ್ಲುವ ಸಮಯ) ವೇಳೆ ಮಹಿಳೆಯರ ದೇಹದಲ್ಲಿ ಬದಲಾವಣೆಗಳು ಸಹಜ. ಕ್ರಮಬದ್ಧ ಆಹಾರ ಮತ್ತು ಯೋಗ್ಯಾಭ್ಯಾಸ ಇದಕ್ಕೆ ಪರಿಣಾಮಕಾರಿ ಚಿಕಿತ್ಸಾ ಕ್ರಮ.

ನಿರ್ಮಿತಾ ಬಂಢಾರಿ ಕುತ್ತಾರ್
ನಿರ್ಮಿತಾ ಬಂಢಾರಿ ಕುತ್ತಾರ್
ಇಂದು ಅಂತರರಾಷ್ಟ್ರೀಯ ಯೋಗ ದಿನ.
ದೇಶ– ವಿದೇಶಗಳಲ್ಲಿ ನಮ್ಮ ಸುತ್ತಮುತ್ತ ಎಲ್ಲೆಡೆಯೂ ಈ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ದಶ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಮಹಿಳಾ ಸಬಲೀಕರಣಕ್ಕೆ ಯೋಗ ಯೋಗ ಉದ್ಯಮ ಶೀಲತೆ ಮತ್ತು ಮಹಿಳಾ ಸಬಲೀಕರಣ’. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಯೋಗದ ಅಗತ್ಯದ ಕುರಿತು ಕೆಲವು ಸಲಹೆಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT