ಶನಿವಾರ, ಏಪ್ರಿಲ್ 1, 2023
23 °C

ಕೊಲ್ಲಮೊಗ್ರು: ಗಿಡ ನಾಟಿ, ಶ್ರಮದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಬ್ರಹ್ಮಣ್ಯ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಹಾಗೂ ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಅರಣ್ಯೀಕರಣ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಕೊಲ್ಲಮೊಗ್ರು ಅರಣ್ಯ ವಿಶ್ರಾಂತಿ ಗೃಹದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥ್ ಯಡದಾಳು ಕಾರ್ಯಕ್ರಮ ಉದ್ಘಾಟಿಸಿದರು. ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯ ಏರಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ, ಕೊಲ್ಲಮೊಗ್ರು ರುದ್ರಭೂಮಿ, ಪರಿಶಿಷ್ಟ ಜಾತಿ-ಪಂಗಡಗಳ ರುದ್ರಭೂಮಿ ಬೆಂಡೋಡಿ, ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಯ್ಯಪ್ಪ ಭಜನಾ ಮಂಡಳಿ ಶಕ್ತಿನಗರ ಕಲ್ಮಕಾರು ಆವರಣದಲ್ಲಿ ಸುಮಾರು 200 ವಿವಿಧ ಬಗೆಯ ಹಣ್ಣು-ಹಂಪಲು ಗಿಡಗಳನ್ನು ನಾಟಿ ಮಾಡಲಾಯಿತು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ಮನೋಜ್, ಅರಣ್ಯ ರಕ್ಷಕ ಸಂತೋಷ್ ಬಲಗನೂರು, ಕೊಲ್ಲಮೊಗ್ರು ಒಕ್ಕೂಟ ಅಧ್ಯಕ್ಷ ಜನಾರ್ದನ ದೋಣಿಪಳ್ಳ, ಯಶೋದಾ ಅಂಬೆಕಲ್ಲು, ಮೋಹಿನಿ ಕಟ್ಟ, ರಾಮಣ್ಣ ಗೌಡ ಅಂಜನಕಜೆ, ಸೇವಾಪ್ರತಿನಿಧಿಗಳಾದ ಸಾವಿತ್ರಿ, ಶೋಭಾ, ಪದ್ಮಾವತಿ ಹಾಗೂ ಚಿನ್ನಪ್ಪ ಗೌಡ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಸೀತಾರಾಮ್, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸತೀಶ್ ಟಿ.ಎನ್. ಮಣಿಕಂಠ ಕಟ್ಟ, ಬಾಲಸುಬ್ರಮಣ್ಯ, ಕುಶಾಲಪ್ಪ ಜಾಲುಮನೆ, ಚಂದ್ರಶೇಖರ್ ಕೋನಡ್ಕ, ಹರ್ಷ ಅಡ್ನೂರು ಮಜಲು, ಕುಸುಮಾಧರ, ಮುತ್ತಪ್ಪ ಕಟ್ಟ, ಸದಾಶಿವ ಕಟ್ಟ, ಶ್ರೀನಿವಾಸ್, ಲಕ್ಷ್ಮಣ ನವಗ್ರಾಮ, ಯಶವಂತ ಕಾಜಿಮಡ್ಕ ಇದ್ದರು.

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕಲ್ಮಕಾರು ಭಜನಾ ಮಂದಿರದ ಹತ್ತಿರದ ಬಸ್ ತಂಗುದಾಣವನ್ನು ದುರಸ್ತಿಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.