ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಉತ್ತರ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಬಳಿ ₹ 20.15 ಕೋಟಿ ಆಸ್ತಿ

Last Updated 20 ಏಪ್ರಿಲ್ 2023, 16:07 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಅವರು ಒಟ್ಟು ₹ 20.15 ಕೋಟಿ ಆಸ್ತಿ ತಮ್ಮ ಹೆಸರಿನಲ್ಲಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಉದ್ಯಮಿಯಾಗಿರುವ ಇನಾಯತ್‌ ಅಲಿ (42 ವರ್ಷ) ವಾರ್ಷಿಕ 1.77 ಕೋಟಿ ವರಮಾನವನ್ನು ಹೊಂದಿದ್ದಾರೆ. ಅವರ ಬಳಿ ₹ 19.11 ಕೋಟಿ ಚರಾಸ್ತಿ ಹಾಗೂ ₹ 1.04 ಕೋಟಿ ಮೌಲ್ಯದ ಸ್ಥಿರಾಸ್ಥಿ ಇದೆ. ಅವರು ಒಟ್ಟು ₹ 1.38 ಕೋಟಿ ಸಾಲ ಹೊಂದಿದ್ದಾರೆ. ಅವರ ಪತ್ನಿ ಶಮಾ ಖತೀಜ ಅವರೂ ಉದ್ಯಮಿಯಾಗಿದ್ದು ವಾರ್ಷಿಕ ₹ 35.09 ಲಕ್ಷ ವರಮಾನ ಹೊಂದಿದ್ದಾರೆ. ಅವರಿಗೆ ₹ 63.69 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹ 5.60 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಗೆ ₹ 1.10 ಕೋಟಿ ಸಾಲ ಇದೆ. ಅಲಿ ಕುಟುಂಬವು ಒಟ್ಟು ₹ 26.38 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ.

ಅಲಿ ಅವರ ಬಳಿ ₹ 3 ಲಕ್ಷ ಹಾಗೂ ಅವರ ಪತ್ನಿ ಬಳಿ ₹ 2ಲಕ್ಷ ನಗದು ಇದೆ. ಅಲಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ₹ 3.35 ಕೋಟಿ ಠೇವಣಿ ಹೊಂದಿದ್ದಾರೆ. ಓಷೀನ್‌ ಕನ್ಸ್‌ಸ್ಟ್ರಕ್ಷನ್ಸ್‌ ಸಂಸ್ಥೆಯಲ್ಲಿ ₹ 52.05 ಲಕ್ಷ ಷೇರು ಹೊಂದಿದ್ದಾರೆ. ಉಳಿತಾಯ ಪತ್ರ ಹಾಗೂ ವಿಮೆಗಳಿಗೆ ಒಟ್ಟು ₹ 24.47 ಲಕ್ಷ ಹೂಡಿಕೆ ಮಾಡಿದ್ದಾರೆ. ಆರು ಮಂದಿಗೆ ಹಾಗೂ ಎರಡು ಸಂಸ್ಥೆಗಳಿಗೆ ಒಟ್ಟು ₹ 6.81 ಕೋಟಿ ಸಾಲ ನೀಡಿದ್ದಾರೆ. ಇದರಲ್ಲಿ ಜಾನ್‌ ಲೋಬೊ ಅವರಿಗೆ ನೀಡಿರುವ ₹ 50 ಲಕ್ಷವೂ ಸೇರಿದೆ. ಓಷೀನ್‌ ಕನ್‌ಸ್ಟ್ರಕ್ಷನ್ಸ್‌ ಕಂಪನಿಯ ಉದ್ಯೋಗಿಗಳ ವೇತನಕ್ಕೆ ₹ 7.06 ಕೋಟಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ₹15.60 ಲಕ್ಷ ಮೌಲ್ಯದ ಇತರ ಸ್ವತ್ತುಗಳು ಅವರ ಬಳಿ ಇವೆ.

ಅಲಿ ಅವರ ಬಳಿ 2012ರಲ್ಲಿ ಖರೀದಿಸಿದ ಟೊಯೋಟಾ ಇನೊವಾ ಕಾರು (₹ 3.12 ಲಕ್ಷ ಮೌಲ್ಯ), 2022ರ ಅಕ್ಟೋಬರ್‌ನಲ್ಲಿ ಖರೀದಿಸಿದ ಇನೋವಾ ಕಾರು ಹಾಗೂ 2010ರಲ್ಲಿ ಖರೀದಿಸಿದ ಟ್ಯಾಂಕರ್‌ (₹ 1.60 ಲಕ್ಷ) ಸೇರಿ ಒಟ್ಟು ₹36.44 ಲಕ್ಷ ಮೌಲ್ಯದ ವಾಹನಗಳಿವೆ. ಪತ್ನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ₹2.69 ಲಕ್ಷ ಠೇವಣಿ ಇದೆ. ಆಕೆಯ ಬಳಿ ವಾಹನವಿಲ್ಲ.

ಅಲಿ ಅವರು ಮೂಲ್ಕಿ ಬಪ್ಪನಾಡು ಬಳಿ 5 ಸೆಂಟ್ಸ್‌ ಜಾಗವನ್ನು 2021ರಲ್ಲಿ ₹ 2.82 ಲಕ್ಷಕ್ಕೆ ಖರೀದಿಸಿದ್ದು, ಅದರ ಈಗಿನ ಮೌಲ್ಯ ₹ 10 ಲಕ್ಷ. ಅವರು 27 ಸೆಂಟ್ಸ್‌ ಕೃಷಿಯೇತರ ಜಮೀನನ್ನು ಬಪ್ಪನಾಡಿನಲ್ಲಿ 2020ರಲ್ಲಿ₹ 22.18 ಲಕ್ಷಕ್ಕೆ ಖರೀದಿಸಿದ್ದು, ಅದರ ಈಗಿನ ಮೌಲ್ಯ 54 ಲಕ್ಷ. ಅವರಿಗೆ ಅಲ್ಲೇ ಪಿತ್ರಾರ್ಜಿತವಾಗಿ ಬಂದ 14 ಸೆಂಟ್ಸ್‌ ವಸತಿ ಕಟ್ಟಡ ಇದ್ದು, ಅದರ ಮೌಲ್ಯ ₹ 40 ಲಕ್ಷ.

ಶಮಾ ಅವರು ಬೆಂಗಳೂರಿನಲ್ಲಿ 2017ರಲ್ಲಿ ₹3.62 ಕೋಟಿ ಮೌಲ್ಯದ ಹಾಗೂ 2020ರಲ್ಲಿ ₹89.76 ಕೋಟಿ ಮೌಲ್ಯದ ವಸತಿ ಕಟ್ಟಡಗಳನ್ನು ಖರೀದಿಸಿದ್ದಾರೆ. ಅವುಗಳ ಈಗಿನ ಒಟ್ಟು ಮಾರುಕಟ್ಟೆ ಮೌಲ್ಯ ₹5.60 ಕೋಟಿ.

ಇನಾಯತ್‌ ಅಲಿ ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಕುಟುಂಬದ ಬಳಿ 2.1 ಕೆ.ಜಿ ಚಿನ್ನ

ಇನಾಯತ್‌ ಅಲಿ ಕುಟುಂಬದ ಬಳಿ 2,117 ಗ್ರಾಂ (2.1 ಕೆ.ಜಿ) ಚಿನ್ನ ಇದೆ. ಇದರಲ್ಲಿ 1,045 ಗ್ರಾಂ ಚಿನ್ನ ಅಲಿ ಅವರ ಹೆಸರಿನಲ್ಲಿದ್ದು, ಅದರ ಮೌಲ್ಯ ₹ 57.50 ಲಕ್ಷ. ಹಾಗೂ 1,072 ಗ್ರಾಂ ಚಿನ್ನ ಪತ್ನಿಯ ಹೆಸರಿನಲ್ಲಿದ್ದು, ಅದರ ಮೌಲ್ಯ ₹ 59 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT