ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಕುಕ್ಕೆ ಜಾತ್ರೋತ್ಸವ: ರಥಗಳಿಗೆ ಗೂಟ ಪೂಜೆ ಮುಹೂರ್ತ

Last Updated 8 ನವೆಂಬರ್ 2022, 13:10 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.21ರಿಂದ ಚಂಪಾಷಷ್ಠಿ ಜಾತ್ರಾಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಮಂಗಳವಾರ ಬೆಳಿಗ್ಗೆ ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯರು ಗೂಟ ಪೂಜೆ ನೆರವೇರಿಸಿದರು.

ಬ್ರಹ್ಮರಥಕ್ಕೆ ಅಳವಡಿಸುವ ಗೂಟಗಳಿಗೆ ಪೂಜೆ ನಡೆಯಿತು. ನಂತರ ಪಂಚಮಿ ರಥ ಹಾಗೂ ಚಂದ್ರಮಂಡಲ ರಥಕ್ಕೆ ಅಳವಡಿಸುವ ಗೂಟಗಳಿಗೆ ಪೂಜೆ ನೆರವೇರಿತು. ಧಾರ್ಮಿಕ ವಿಧಿಗಳ ಬಳಿಕ ರಥಗಳಿಗೆ ಗೂಟ ಹಾಕಲಾಯಿತು. ಕ್ಷೇತ್ರದ ಮೂಲ ನಿವಾಸಿ ಮಲೆಕುಡಿಯ ಜನಾಂಗದವರಿಗೆ ಕ್ಷೇತ್ರ ಪುರೋಹಿತರು ರಥ ಕಟ್ಟಲು ದೇವರ ಪ್ರಸಾದದೊಂದಿಗೆ ವೀಳ್ಯ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ವನಜಾ ವಿ ಭಟ್, ಶೋಭಾ ಗಿರಿಧರ್, ದೇವಳದ ಪಾಟಾಳಿ ಶಿವಪ್ರಸಾದ್ ಸಿ.ಎಸ್, ಹೆಬ್ಬಾರ್ ಪ್ರಸನ್ನ ಭಟ್, ಮಲೆಕುಡಿಯ ಸಮುದಾಯ ಗುರಿಕಾರ ಐತಪ್ಪ ಮಲೆ ಅರ್ಗುಡಿ, ಸಹ ಗುರಿಕಾರ ದಿನಕರ ಮಲೆ ಕುಲ್ಕುಂದ, ಅಂಗಾರ ಮಲೆ, ಎ ವಿ ನಾಗೇಶ್, ಮೊಂಟ ಮಲೆ, ಸುಂದರ ಮಲೆ, ರಾಮಯ್ಯ ಮಲೆ, ಜನಾರ್ದನ ಮಲೆ, ಜಾನಪ್ಪ ಅರ್ಗುಡಿ , ವೇದ ಮಲೆ, ಕುಮಾರ ಮಲೆ ಪ್ರಮುಖರಾದ ಭಾಸ್ಕರ ಅರ್ಗಡಿ. ಕುಮಾರ ಅರ್ಗುಡಿ, ಶಿವಕುಮಾರ ಅರ್ಗುಡಿ, ಶೇಕರ ಕೊಡಿಕಜೆ, ಎ ವಿ ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT