ಉಳ್ಳಾಲ: ಕ್ಯಾಪ್ಸ್ ಫೌಂಡೇಷನ್ ವತಿಯಿಂದ ಕೃಷ್ಣ ಎಸ್ಎಂಯುಕೆ ಸೈನ್ಸ್ ಪಾರ್ಕ್ 4.0ರ ಉದ್ಘಾಟನಾ ಸಮಾರಂಭ ಜ.19ರಂದು ಬೆಳಿಗ್ಗೆ 9.30ಕ್ಕೆ ಎಸ್ಎಂವಿಕೆ ಕುಂಜತ್ತೂರಿನಲ್ಲಿ ನಡೆಯಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಹೊಂದಿರುವ ಈ ಯೋಜನೆ, ಹೊರಾಂಗಣ ಪ್ರಯೋಗಗಳು ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಪ್ರಾಯೋಗಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ವಿಜ್ಞಾನವನ್ನು ಆಟದ ಮೂಲಕ ಕಲಿಸುವ ಉದ್ದೇಶದಿಂದ ಕಟೀಲು, ಕೋಟ, ರಾಮಕುಂಜದಲ್ಲಿ ಭಾಗಗಳಲ್ಲಿ ಯಶಸ್ಸಿನ ಕಾರ್ಯಕ್ರಮವನ್ನು ನಡೆಸಿದೆ. ವಿಜ್ಞಾನವನ್ನು ಮನರಂಜನೆಯೊಂದಿಗೆ ಮಕ್ಕಳಿಗೆ ಪರಿಚಯಿಸುವ ಈ ಪಾರ್ಕ್ಗೆ ಒಂದೂವರೆ ವರ್ಷಗಳಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ಭೇಟಿ ನೀಡಿದ್ದರೆ ಎಂದರು.

ಕ್ಯಾಪ್ಸ್ ಫೌಂಡೇಷನ್ ವತಿಯಿಂದ ಎಜು ಉತ್ಸವ್ ಕಾರ್ಯಕ್ರಮವನ್ನು ವಿಜ್ಞಾನ ವನದಲ್ಲಿ ಹಮ್ಮಿಕೊಳ್ಳಲಾಗಿದ್ದು, 70ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭ ಮಕ್ಕಳಿಗೆ ಸ್ಟೇಷನರಿ, ಬಟ್ಟೆ ಚೀಲ ಹಾಗೂ ಸ್ಟೀಲ್ ಬಾಟಲ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ಮಾಡದಂತೆನ ಅರಿವು ಮೂಡಿಸಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬಡ ಮಕ್ಕಳ ಶಾಲೆಗಳಿಗಾಗಿ ಬಸ್ ಪ್ರಯಾಣ ವೆಚ್ಚವನ್ನು ಸಂಸ್ಥೆ ಭರಿಸಲಿದೆ. ಹೈಸ್ಕೂಲ್ನಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಪ್ರಸನ್ನ ಶೆಣೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪ್ರಮುಖರಾದ ಸುರೇಶ್ ಶೆಟ್ಟಿ, ಕುಸುಮಾ, ದಿನೇಶ್ ಶೆಟ್ಟಿ, ಪೂರ್ಣಿಮಾ ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.