ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ದೇವರ ಬಲಿ ಉತ್ಸವ, ಬಂಡಿ ಉತ್ಸವ ಮತ್ತು ತೆಪ್ಪೋತ್ಸವ
Published 13 ಡಿಸೆಂಬರ್ 2023, 13:58 IST
Last Updated 13 ಡಿಸೆಂಬರ್ 2023, 13:58 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ದೇವರ ವಿವಿಧ ಉತ್ಸವ, ಧಾರ್ಮಿಕ ವಿಧಿಗಳೊಂದಿಗೆ ಲಕ್ಷದೀಪೋತ್ಸವ ವೈಭವದಿಂದ ನಡೆಯಿತು.

ದೇವಳದ ರಥ ಬೀದಿಯುದ್ದಕ್ಕೂ ಹಣತೆ ಬೆಳಕು ಕಂಗೊಳಿತು. ರಥ ಬೀದಿಯುದ್ದಕ್ಕೂ ಹಾಕಿದ್ದ ರಂಗೋಲಿ, ಅದರ ಮೇಲೆ ಹಣತೆಯ ಬೆಳಕು ಪ್ರಜ್ವಲಿಸುತ್ತಿತ್ತು. ಭಜನಾ ಸತ್ಸಂಗ,  ವಿದ್ಯಾರ್ಥಿಗಳಿಂದ ಮಹಾಲಿಂಗೇಶ್ವರ ದೇವರಿಗೆ ದೀಪ ನಮನ ನಡೆಯಿತು.

ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಥ ಬೀದಿಯಲ್ಲಿ ಬಾಳೆದಿಂಡಿನ ಧಳಿಯಲ್ಲಿರಿಸಿದ ಹಣತೆಗೆ ದೀಪ ಬೆಳಗುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ಡಾ. ಸುಧಾ ಎಸ್.ರಾವ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ.ಕೆ.ವೀಣಾ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟಟಟಿ, ವಿ.ಎಸ್ ಭಟ್, ಚನಿಲ ತಿಮ್ಮಪ್ಪ ಶೆಟ್ಟಿ, ಸೀತಾರಾಮ ರೈ ಕೆದಂಬಾಡಿಗುತ್ತು ಮತ್ತಿತರರು ಇದ್ದರು.

ರಥ ಬೀದಿಯುದಕ್ಕೂ ಭಕ್ತರು ಹಣತೆ ಬೆಳಗಿಸಿದರು. ಎಣ್ಣೆ ಮತ್ತು ಬತ್ತಿಯನ್ನು ದೇವಳದ ವತಿಯಿಂದ ನೀಡಲಾಗಿತ್ತು. ಕುಂಬಾರರ ಗುಡಿ ಕೈಗಾರಿಕಾ ಸಂಘದಿಂದ ಕಡಿಮೆ ದರದಲ್ಲಿ ಹಣತೆ ವಿತರಣೆ ನಡೆಯಿತು. ದೇವಳದ ನಿತ್ಯ ಕರಸೇವಕರು ರಥ ಬೀದಿಯಲ್ಲಿ ಹಣತೆ ಬೆಳಗಿಸುವ ಕಾರ್ಯಕ್ಕೆ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT