ಮಂಗಳೂರು-ಬೆಂಗಳೂರು ಹೆದ್ದಾರಿ ಚತುಷ್ಪಥ: ಹೆಚ್ಚುವರಿ ಜಾಗ ಸ್ವಾಧೀನಕ್ಕೆ ವಿರೋಧ

7
ನೆಲ್ಯಾಡಿ ವರ್ತಕರ, ಕಟ್ಟಡ ಮಾಲೀಕರ ಸಂಘದ ಸಭೆ

ಮಂಗಳೂರು-ಬೆಂಗಳೂರು ಹೆದ್ದಾರಿ ಚತುಷ್ಪಥ: ಹೆಚ್ಚುವರಿ ಜಾಗ ಸ್ವಾಧೀನಕ್ಕೆ ವಿರೋಧ

Published:
Updated:
Deccan Herald

ನೆಲ್ಯಾಡಿ(ಉಪ್ಪಿನಂಗಡಿ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪಥ ಕಾಮಗಾರಿ ಸಲುವಾಗಿ ನೆಲ್ಯಾಡಿ ಪೇಟೆಯಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ತಲಾ 2.5 ಮೀಟರ್ ಜಾಗ ಸ್ವಾಧೀನಕ್ಕೆ ನೆಲ್ಯಾಡಿ ಕಟ್ಟಡ ಮಲೀಕರ ಹಾಗೂ ವರ್ತಕರ ಸಂಘ ವಿರೋಧ ವ್ಯಕ್ತಪಡಿಸಿದ್ದು ಈ ಸಂಬಂಧ ಹೋರಾಟ ನಡೆಸಲು ನಿರ್ಧರಿಸಿದೆ.

 ನೆಲ್ಯಾಡಿ ಕಟ್ಟಡ ಮಾಲೀಕರ ಹಾಗೂ ವರ್ತಕರ ಸಂಘದ ಸಭೆಯಲ್ಲಿ ಬುಧವಾರ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತಂತೆ ಹೋರಾಟ ಸಮಿತಿ ರಚಿಸಲಾಗಿದೆ. ಸಭೆಯಲ್ಲಿ ಕಟ್ಟಡ ಮಾಲೀಕರ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಇದೀಗ ಹೆಚ್ಚುವರಿಯಾಗಿ ಹೆದ್ದಾರಿಯ ಎರಡೂ ಬದಿಯೂ ತಲಾ 2.5 ಮೀಟರ್‌ಗಳಂತೆ ಜಾಗ ಸ್ವಾಧೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಎಲ್ ಅಂಡ್‌ ಟಿ ಕಂಪನಿ ಗುರುತು ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ನೆಲ್ಯಾಡಿ ಪೇಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಇದರ ಬದಲು ಮೇಲು ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಬೇಕಾಗಿದೆ. ಹೋರಾಟ ಸಮಿತಿ ರಚಿಸಿಕೊಂಡು ಶಾಸಕರು, ಸಂಸದರ ಜೊತೆಗೆ ಸಮಾಲೋಚನೆ ನಡೆಸಿ ಮುಂದುವರಿಯಬೇಕಾಗಿದೆ ಎಂದರು. ಇದಕ್ಕೆ ಕಟ್ಟಡ ಮಾಲಕರು, ವರ್ತಕರು ಸಹಮತ ಸೂಚಿಸಿ ಅದರಂತೆ ನಿರ್ಣಯಿಸಲಾಯಿತು.‌‌

ಕಟ್ಟಡ ಮಾಲೀಕರ ಸಂಘದ ಕೋಶಾಧಿಕಾರಿ ಶಿವಣ್ಣ ಹೆಗ್ಡೆ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್, ನೆಲ್ಯಾಡಿ ಸೇಂಟ್‌ ಜಾರ್ಜ್‌ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್,  ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ, ಹೋಟೆಲ್ ಉದ್ಯಮಿ ಯು.ಕೆ. ಹಂಝ, ವರ್ತಕರ ಸಂಘದ ಕಾನೂನು ಸಲಹೆಗಾರ, ವಕೀಲ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿದರು.  ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !