ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ಕುಸಿತದ ಭೀತಿಯಲ್ಲಿರುವ ಧರೆ

ಪರಿಹಾರ ಕಾಣದೆ ವರ್ಷದಿಂದ ಕಾಡುತ್ತಿರುವ ಭೀತಿ
Published 4 ಜುಲೈ 2024, 13:41 IST
Last Updated 4 ಜುಲೈ 2024, 13:41 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪಾದಾಳ ಎಂಬಲ್ಲಿ ನೂಜಿ-ಅರ್ತಿಲ ರಸ್ತೆ ಬದಿಯ ಧರೆ ಕಳೆದ ಮಳೆಗಾಲದಲ್ಲಿ ಭಾಗಶಃ ಕುಸಿದಿದ್ದು, ಧರೆಗೆ ತಾಗಿಕೊಂಡು ಇರುವ ಮನೆಯ ಸದಸ್ಯರು ಆತಂಕಕ್ಕೀಡಾಗಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿ ವರ್ಷದ ಹಿಂದೆಯೇ ಮನವಿ ಸಲ್ಲಿಸಿದ್ದು, ಯಾರೂ ಸ್ಪಂದಿಸಿಲ್ಲ.

ಪಾದಾಳದ ಸುರೇಶ್ ಶೆಟ್ಟಿ ಎಂಬುವರ ಮನೆ ಬದಿಯಲ್ಲಿರುವ ಧರೆ ಕುಸಿತಕ್ಕೊಳಗಾಗಿತ್ತು. ಬಂಡೆ ಕಲ್ಲುಗಳು ಅವರ ಮನೆ ಅಂಗಳಕ್ಕೆ ಬೀಳುತ್ತಿದ್ದು, ಅವರ ಪಂಪ್ ಹೌಸ್‌ಗೆ ಹಾನಿಯಾಗಿತ್ತು. ಧರೆಯ ಮೇಲ್ಭಾಗದಲ್ಲಿ ನೂಜಿ-ಅರ್ತಿಲ ಸಂಪರ್ಕ ರಸ್ತೆ ಇದ್ದು, ಇದರ ಅಂಚಿನ ವರೆಗೆ ಧರೆ ಕುಸಿದಿದೆ. ಧರೆ ಇನ್ನಷ್ಟು ಕುಸಿದರೆ ಕಾಂಕ್ರೀಟ್ ರಸ್ತೆಯೂ ಕುಸಿದು ಸಾಧ್ಯತೆ ಇದೆ.

ಸಂಭವನೀಯ ಅಪಾಯ ತಡೆಯಲು ತಡೆಗೋಡೆ ನಿರ್ಮಿಸುವಂತೆ ಸುರೇಶ್ ಶೆಟ್ಟಿ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕರು ‘ತಡೆಗೋಡೆ ನಿರ್ಮಾಣಕ್ಕೆ ಅನುದಾನ ಇಲ್ಲ, ಮುಂದಿನ ವರ್ಷದಲ್ಲಿ ಅದನ್ನು ಸೇರ್ಪಡೆ ಮಾಡಬಹುದು’ ಎಂದು ಸೂಚಿಸಿದ್ದರು.

ಸಂಭವನೀಯ ದುರಂತ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಕೃಷ್ಣ ರಾವ್ ಅರ್ತಿಲ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT