ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ | ಲಾಯಿಲ, ಕತ್ಪಾಜೆ ಬಳಿ ಗುಡ್ಡ ಕುಸಿತ

Published 26 ಜುಲೈ 2023, 16:27 IST
Last Updated 26 ಜುಲೈ 2023, 16:27 IST
ಅಕ್ಷರ ಗಾತ್ರ

ಬೆಳ್ತಂಗಡಿ: ತಾಲ್ಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಗುಡ್ಡ ಕುಸಿತ, ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ.

ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಣಾಲು ಆಯಿಲ ರಸ್ತೆಯ ಕತ್ಪಾಜೆ ಬಳಿ ಗುಡ್ಡವೊಂದು ಕುಸಿದು ರಸ್ತೆ ಸಂಚಾರ ಅಪಾಯಕಾರಿಯಾಗಿದೆ. ಇದು 28 ಪರಿಶಿಷ್ಟ ಪಂಗಡದದವರ ಮನೆ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ಈಗಾಗಲೇ ಲಾಯಿಲ ಗ್ರಾಮ ಪಂಚಾಯಿತಿ ವತಿಯಿಂದ ಎಚ್ಚರಿಕೆ ಫಲಕವನ್ನು ಅಳವಡಿಸಿ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ಆಶಾ ಸಲ್ದಾನ, ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ಹೇಮಚಂದ್ರ, ಲಾಯಿಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ.ಪಿ, ಲೆಕ್ಕ ಸಹಾಯಕಿ ಸುಪ್ರೀತಾ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು.

ಲಾಯಿಲ ಕತ್ಪಾಜೆ ಬಳಿ ರಸ್ತೆ ಬದಿಯ ಗುಡ್ಡ ಕುಸಿದಿರುವುದು
ಲಾಯಿಲ ಕತ್ಪಾಜೆ ಬಳಿ ರಸ್ತೆ ಬದಿಯ ಗುಡ್ಡ ಕುಸಿದಿರುವುದು
ಲಾಯಿಲ ಕತ್ಪಾಜೆ ಬಳಿ ರಸ್ತೆ ಬದಿಯ ಗುಡ್ಡ ಕುಸಿದಿರುವುದು
ಲಾಯಿಲ ಕತ್ಪಾಜೆ ಬಳಿ ರಸ್ತೆ ಬದಿಯ ಗುಡ್ಡ ಕುಸಿದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT